KDP Meeting: ದಕ್ಷಿಣ ಕನ್ನಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೇಲೆ ಬಿಜೆಪಿ ಶಾಸಕರ ವಾಗ್ದಾಳಿ

KDP Meeting: ದಕ್ಷಿಣ ಕನ್ನಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೇಲೆ ಬಿಜೆಪಿ ಶಾಸಕರ ವಾಗ್ದಾಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2023 | 4:12 PM

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಜಿಲ್ಲೆಯ ಬಿಜೆಪಿ ಶಾಸಕರ ತೀವ್ರ ವಾಗ್ದಾಳಿ ಎದುರಿಸಬೇಕಾಯಿತು. ಅವರೆಲ್ಲರ ಪ್ರಮುಖ ದೂರೆಂದರೆ ಜಿಲ್ಲೆಯ ಸರ್ಕಾರೀ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕರು ಶಿಷ್ಟಾಚಾರ (protocol) ಉಲ್ಲಂಘಿಸಿ ವೇದಿಕೆಗಳ ಮೇಲೆ ಆಸೀನರಾಗುತ್ತಿರುವುದು. ಶಿಷ್ಟಾಚಾರದ ಪ್ರಕಾರ ಹಾಲಿ ಶಾಸಕರು-ಅವರು ಯಾವುದೇ ಪಕ್ಷದವರಾಗಿರಲಿ ವೇದಿಕೆಯಲ್ಲಿ ಕೂತಿರಬೇಕು. ಇನ್ನು ಮುಂದೆ ಹೀಗಾಗದಂತೆ ಸಚಿವರು ಗಮನವಹಿಸಬೇಕು ಎಂದು ಬಿಜೆಪಿ ಶಾಸಕರು ತಾಕೀತು ಮಾಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ