ದರ್ಶನ್ಗೆ ಆರತಿ ಬೆಳಗಿದ ಹೆಣ್ಮಕ್ಕಳು; ಹುಟ್ಟುಹಬ್ಬದ ದಿನ ಅಭಿಮಾನದ ಹೊಳೆ
ದರ್ಶನ್ ಅವರು ಇಂದು (ಫೆ.16) ಅಭಿಮಾನಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ. ಬೆಂಗಳೂರಿನ ಅವರ ಮನೆ ಎದುರು ಜನಸಾಗರ ಸೇರಿದೆ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ಕಂಡು ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಮಹಿಳಾ ಅಭಿಮಾನಿಗಳು ಆರತಿ ಬೆಳಗುವ ಮೂಲಕ ಶುಭ ಹಾರೈಸುತ್ತಿದ್ದಾರೆ. ಬಹಳ ಸಂಭ್ರಮದಿಂದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.
ನಟ ದರ್ಶನ್ ಅವರ ಹುಟ್ಟುಹಬ್ಬದ (Darshan Birthday) ಪ್ರಯುಕ್ತ ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ನಿವಾಸದ ಬಳಿ ಜಮಾಯಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಅಭಿಮಾನಿಗಳು ಅವರನ್ನು ಭೇಟಿ ಮಾಡಿ ಶುಭ ಹಾರೈಸುತ್ತಿದ್ದಾರೆ. ಜನ್ಮದಿನದ ಪ್ರಯುಕ್ತ ಮಹಿಳಾಭಿಮಾನಿಗಳು (Darshan Fans) ದರ್ಶನ್ಗೆ ಆರತಿ ಬೆಳಗಿದ್ದಾರೆ. ತಿಲಕ ಇಟ್ಟು ಶುಭ ಕೋರಿದ್ದಾರೆ. ಇನ್ನೂ ಕೆಲವರು ದೃಷ್ಟಿ ತೆಗೆಯುವ ಮೂಲಕ ಅಭಿಮಾನ ಪ್ರದರ್ಶಿಸಿದ್ದಾರೆ. ದರ್ಶನ್ (Darshan) ಅವರ 47ನೇ ವರ್ಷದ ಹುಟ್ಟುಹಬ್ಬವನ್ನು ಎಲ್ಲ ಕಡೆಗಳಲ್ಲಿ ಆಚರಿಸಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ತೆರೆಕಂಡ ‘ಕಾಟೇರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಹಾಗಾಗಿ ಈ ಬಾರಿ ‘ಚಾಲೆಂಜಿಂಗ್ ಸ್ಟಾರ್’ ಬರ್ತ್ಡೇ ಬಹಳ ವಿಶೇಷವಾಗಿದೆ. ಅವರ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಮನೆ ಮಾಡಿದೆ. ದರ್ಶನ್ ಬರ್ತ್ಡೇ ಪ್ರಯುಕ್ತ ‘ಡೆವಿಲ್’ ಸಿನಿಮಾದ ಫಸ್ಟ್ಲುಕ್ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾಗೆ ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ನಟನೆಯ 59ನೇ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾದ ಪೋಸ್ಟರ್ ಕೂಡ ಇದು ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.