Karnataka Budget 2024: ಬಜೆಟ್ ಮಂಡಿಸುವಾಗ ಕೇಂದ್ರ ಸರ್ಕಾರವನ್ನು ದೂರಿದ ಸಿದ್ದರಾಮಯ್ಯ, ರೊಚ್ಚಿಗೆದ್ದ ಬಿಜೆಪಿ ಶಾಸಕರು
Karnataka Budget 2024' 2017ರಿಂದ 2023ರ ಅವಧಿಯಲ್ಲಿ ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ಶೇಕಡ 153 ರಷ್ಟು ಹೆಚ್ಚಳವಾಗಿದೆ ಆದರೆ ಅವುಗಳ ಹಂಚಿಕೆ ನ್ಯಾಯಯುತವಾದ ರೀತಿಯಲ್ಲಿ ಆಗುತ್ತಿಲ್ಲ ಎಂದ ಸಿದ್ದರಾಮಯ್ಯ ಹೇಳಿದರು. ಹಂಚಿಕೆಯಲ್ಲಿ ಅಸಮತೋಲನದಿಂದಾಗಿ ಕಳೆದ 7 ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರೂ. 45,322 ಕೋಟಿ ನಷ್ಟವುಂಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದಿನ ತಮ್ಮ ಬಜೆಟ್ ಭಾಷಣದಲ್ಲಿ ತೆರಿಗೆಗಳಿಂದ ಸಂಗ್ರಹವಾಗುವ ರಾಜಸ್ವದಲ್ಲಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿದಾಗ ರೊಚ್ಚಿಗೆದ್ದ ಬಿಜೆಪಿ ಶಾಸಕರು (BJP MLAs) ಅವರ ಮೇಲೆ ಮುಗಿಬಿದ್ದರು. ಕೇಂದ್ರ ಸರ್ಕಾರ ಪ್ರತಿವರ್ಷ ಸೆಸ್ (cess) ಮತ್ತು ಸರ್ಚಾರ್ಜ್ (surcharge) ಹೆಚ್ಚಿಸುತ್ತಿದೆ. 2017ರಿಂದ 2023ರ ಅವಧಿಯಲ್ಲಿ ಸೆಸ್ ಮತ್ತ್ತು ಸರ್ಚಾರ್ಜ್ ಗಳಲ್ಲಿ ಶೇಕಡ 153 ರಷ್ಟು ಹೆಚ್ಚಳವಾಗಿದೆ ಆದರೆ ಅವುಗಳ ಹಂಚಿಕೆ ನ್ಯಾಯಯುತವಾದ ರೀತಿಯಲ್ಲಿ ಆಗುತ್ತಿಲ್ಲ ಎಂದ ಸಿದ್ದರಾಮಯ್ಯ ಹೇಳಿದರು. ಹಂಚಿಕೆಯಲ್ಲಿ ಅಸಮತೋಲನದಿಂದಾಗಿ ಕಳೆದ 7 ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರೂ. 45,322 ಕೋಟಿ ನಷ್ಟವುಂಟಾಗಿದೆ ಎಂದು ಹೇಳಿದ ಅವರು, ಜಿಎಸ್ ಟಿಯ ಅವೈಜ್ಞಾನಿಕ ಜಾರಿ, ಸೆಸ್ ಮತ್ತು ಸರ್ಚಾರ್ಜ್ ಹೆಚ್ಚಳ ಹಾಗೂ ತೆರಿಗೆ ಹಣ ಹಂಚಿಕೆಯಲ್ಲಿ ಸೂತ್ರ ಬದಲಾವಣೆಯಿಂದಾಗಿ ರಾಜ್ಯಗಳಿಗೆ ತೀವ್ರಸ್ವರೂಪದ ಅನ್ಯಾಯವಾಗುತ್ತಿದೆ; ಅದರೆ, ದೇಶದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಆಡಳಿತ ನಡೆಸುತ್ತಿರುವುದರಿಂದ ಕೇಂದ್ರದ ವಿರುದ್ಧ ಅವು ಧ್ವನಿಯೆತ್ತುತ್ತಿಲ್ಲ ಅಂತ ಸಿದ್ದರಾಮಯ್ಯ ಹೇಳಿದಾಗ, ವಿರೋಧ ಪಕ್ಷದ ನಾಯಕ ಆರ್ ಅಶೋಕ, ಬಿವೈ ವಿಜಯೇಂದ್ರ ಮತ್ತು ಪಕ್ಷದ ಇತರ ಶಾಸಕರು ಒಕ್ಕೊರಲಿನಿಂದ ಅವರ ಮೇಲೆ ಮುಗಿಬಿದ್ದರು. ಎಲ್ಲರೂ ಒಟ್ಟಿಗೆ ಮಾತಾಡಿದ್ದರಿಂದ ಯಾರೇನು ಹೇಳುತ್ತಿದ್ದಾರೆ ಅನ್ನೋದು ಗೊತ್ತಾಗಲ್ಲ. ಅದರೆ, ಸಿದ್ದರಾಮಯ್ಯ ಮಾತ್ರ ಗದ್ದಲದಿಂದ ವಿಚಲಿತರಾಗದೆ ತಮ್ಮ ಭಾಷಣ ಮುಂದುವರಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ