‘ದರ್ಶನ್​ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ

Updated on: Jul 01, 2024 | 10:54 PM

ನಟ ದರ್ಶನ್​ ಅವರು ಪರಪ್ಪನ ಅಗ್ರಹಾರದಿಂದ ಆದಷ್ಟು ಬೇಗ ಹೊರಗೆ ಬರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಕೆಲವರು ದೇವರ ಬಳಿ ಈ ಕುರಿತು ಪ್ರಶ್ನೆ ಕೇಳಿದ್ದಾರೆ. ದೇವರ ವಿಗ್ರಹದ ಮೇಲಿನ ಹೂವು ಪ್ರಸಾದ ರೂಪದಲ್ಲಿ ಬಿದ್ದಿದೆ. ಅಂದರೆ, ದರ್ಶನ್​ ಅವರು ರಿಲೀಸ್​ ಆಗುತ್ತಾರೆ ಎಂಬ ಸೂಚನೆ ಸಿಕ್ಕಿದೆ. ಸೋಶಿಯಲ್​ ಮೀಡಿಯಾದಲ್ಲಿ ಈವಿಡಿಯೋ ವೈರಲ್​ ಆಗಿದೆ.

ಕೊಲೆ ಕೇಸ್​ನಲ್ಲಿ ಆರೋಪಿ ಆಗಿರುವ ದರ್ಶನ್​ (Darshan) ಈಗ ಜೈಲಿನಲ್ಲಿ ಇದ್ದಾರೆ. ಅವರು ಬಿಡುಗಡೆ ಆಗಬೇಕು ಎಂಬುದು ಅಭಿಮಾನಿಗಳ (Darshan Fans) ಬಯಕೆ. ಅದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಈಗ ವೈರಲ್​ ಆಗಿದೆ. ದರ್ಶನ್​ ರಿಲೀಸ್​ ಆಗುತ್ತಾರೋ ಇಲ್ಲವೋ ಎಂಬ ಪ್ರಶ್ನೆಯನ್ನು ಪೂಜಾರಿ ಮೂಲಕ ದೇವರ ಮುಂದೆ ಇಡಲಾಗಿದೆ. ‘ನೋಡಪ್ಪ.. ಈ ವಿಷಯನಾ ಕೇಳಬೇಕೋ ಅಥವಾ ಕೇಳಬಾರದೋ ಗೊತ್ತಿಲ್ಲ. ಆದರೆ ಅಭಿಮಾನಿಗಳ ಪರವಾಗಿ ವರ ಕೇಳ್ತಾ ಇದ್ದೇನೆ. ದರ್ಶನ್ ಅಂತಾ ಒಬ್ಬರು ಕಲಾವಿದರು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಎಲ್ಲಾ ಸಮಸ್ಯೆ ನಿವಾರಣೆ ಆಗಿ ಅವರು ಮತ್ತೆ ಅಭಿಮಾನಿಗಳನ್ನು ಸೇರುತ್ತಾರೆ ಎಂಬುದಾದರೆ ಆಶೀರ್ವಾದ ಮಾಡು’ ಎಂದು ಪೂಜಾರಿ ವರ ಕೇಳುತ್ತಿದ್ದಂತೆಯೇ ದೇವರ ಮೇಲಿದ್ದ ಹೂವಿನ ಹಾರ ಕೆಳಗೆ ಬಿದ್ದಿದೆ. ದರ್ಶನ್​ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More