ಬೇಲ್ ಪಡೆದಿರುವ ದರ್ಶನ್ ಜೈಲಿಂದ ಹೊರಬರುವುದನ್ನು ಕಾಯುತ್ತಿರುವ ಬಳ್ಳಾರಿ ಅಭಿಮಾನಿಗಳು

Updated on: Oct 30, 2024 | 4:48 PM

ಈಗಾಗಲೇ ವರದಿಯಾಗಿರುವಂತೆ ದರ್ಶನ್​ಗೆ ಬೆನ್ನುನೋವಿನ ಚಿಕಿತ್ಸೆ ಹಿನ್ನೆಲೆಯಲ್ಲಿ 6-ವಾರ ಅವಧಿಯ ಮಧ್ಯಂತರ ಜಾಮೀನು ಮಂಜೂರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17ಆರೋಪಿಗಳು. ದರ್ಶನ್ ಅರೋಪಿ ನಂಬರ್ 2 ಆಗಿದ್ದರೆ ಅವರ ಗೆಳತಿ ಪವಿತ್ರಾ ಗೌಡ ಆರೋಪಿ ನಂಬರ್ ವನ್ ಆಗಿದ್ದಾರೆ.

 

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಐದು ತಿಂಗಳಿಂದ ಜೈಲಲ್ಲಿರುವ ನಟ ದರ್ಶನ್​ಗೆ ಇಂದು ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಬೇಲ್ ಸಿಕ್ಕಿದ್ದು ಅವರಿಗೆ ನೀಡಿರುವಷ್ಟೇ ಸಂತೋಷವನ್ನು ಅವರ ಅಭಿಮಾನಿಗಳಿಗೂ ನೀಡಿದೆ. ನಗರದ ಸೆಂಟ್ರಲ್ ಜೈಲು ಮುಂದೆ ನೆರೆದಿರುವ ಇವರೆಲ್ಲ ನಟನ ಅಭಿಮಾನಿಗಳು. ದರ್ಶನ್ ಹೊರಬರುವುದನ್ನೇ ಕಾಯುತ್ತಾ ನಿಂತಿರುವ ಇವರು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದಾರೆ. ಮುಂಜಾಗ್ರತೆಯ ಕ್ರಮವಾಗಿ ಪೊಲೀಸರು ಜೈಲು ಮುಂದಿನ ರಸ್ತೆಯನ್ನು ಬ್ಯಾರಿಕೇಡ್ ಗಳಿಂದ ಬ್ಲಾಕ್ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ದರ್ಶನ್​​ಗೆ ಬೆನ್ನು ನೋವು ಬಂದಿದ್ದು ಇಂದು ನಿನ್ನೆಯಲ್ಲ’; ವಕೀಲರ ಸ್ಪಷ್ಟನೆ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More