ಮೈಸೂರಿನಲ್ಲಿ ದರ್ಶನ್ ಫ್ಯಾನ್ಸ್ ಮೆರವಣಿಗೆ: ‘ದಿ ಡೆವಿಲ್’ ಸಿನಿಮಾಗೆ ಭರ್ಜರಿ ಸ್ವಾಗತ

Updated on: Dec 10, 2025 | 7:00 PM

ಡಿ.11ರಂದು ‘ದಿ ಡೆವಿಲ್’ ಸಿನಿಮಾ ತೆರೆಕಾಣಲಿದೆ. ಚಿತ್ರದ ಬಿಡುಗಡೆಗೂ ಮುನ್ನವೇ ಫ್ಯಾನ್ಸ್ ಸಂಭ್ರಮಾಚರಣೆ ಜೋರಾಗಿದೆ. ಸೆಲೆಬ್ರೇಷನ್ ಝಲಕ್ ಈ ವಿಡಿಯೋದಲ್ಲಿದೆ ನೋಡಿ. ಮೈಸೂರಿನಲ್ಲಿ ಇರುವ ದರ್ಶನ್ ಅವರ ಅಭಿಮಾನಿಗಳು ನಗರದ ತುಂಬೆಲ್ಲ ಮೆರವಣಿಗೆ ಮಾಡಿದ್ದಾರೆ. ದರ್ಶನ್ ಅವರ ಕಟೌಟ್​​ಗಳು ಎಲ್ಲ ಕಡೆಗಳಲ್ಲಿ ರಾರಾಜಿಸುತ್ತಿವೆ.

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿದ್ದಾರೆ. ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವಾಗಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ದರ್ಶನ್ ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಈ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಅಭಿಮಾನಿಗಳು ಈ ಚಿತ್ರಕ್ಕೆ ಪ್ರಚಾರ ನೀಡುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ದರ್ಶನ್ ಅವರ ಕಟೌಟ್​​ಗಳು ರಾರಾಜಿಸುತ್ತಿವೆ. ಮೈಸೂರಿನಲ್ಲಿ ಇರುವ ದರ್ಶನ್ ಅಭಿಮಾನಿಗಳು ನಗರದ ತುಂಬ ಮೆರವಣಿಗೆ ಮಾಡಿದ್ದಾರೆ. ಆ ಮೂಲಕ ‘ದಿ ಡೆವಿಲ್’ (The Devil) ಸಿನಿಮಾಗೆ ಭರ್ಜರಿ ಪ್ರಚಾರ ನೀಡಿದ್ದಾರೆ. ಡಿಸೆಂಬರ್ 11ರಂದು ಈ ಸಿನಿಮಾ ತೆರೆಕಾಣಲಿದೆ. ಸಿನಿಮಾದ ಬಿಡುಗಡೆಗೂ ಮುನ್ನವೇ ಫ್ಯಾನ್ಸ್ ಸೆಲೆಬ್ರೇಷನ್ ಜೋರಾಗಿದೆ. ಅದರ ಝಲಕ್ ಈ ವಿಡಿಯೋದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.