ನಿಲ್ಲಲೇ ಇಲ್ಲ ‘ಬಾಸ್ ಬಾಸ್ ಡಿ ಬಾಸ್’ ಜೈಕಾರ: ಬೇಸರದಿಂದ ಮಾತು ನಿಲ್ಲಿಸಿದ ರಚಿತಾ ರಾಮ್

Updated on: Nov 02, 2025 | 8:24 AM

ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ‘ಲ್ಯಾಂಡ್ ಲಾರ್ಡ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ಕಾರ್ಯಕ್ರಮದ ವೇದಿಕೆಯಲ್ಲಿ ರಚಿತಾ ರಾಮ್ ಅವರು ಮಾತನಾಡುವಾಗ ದರ್ಶನ್ ಅಭಿಮಾನಿಗಳು ಕೂಗಾಡಿದರು. ಒಂದೇ ಸಮನೇ ದರ್ಶನ್ ಅವರಿಗೆ ಜೈಕಾರ ಕೂಗಿದ್ದರಿಂದ ರಚಿತಾ ಅವರ ಮಾತಿಗೆ ಅಡ್ಡಿ ಆಯಿತು.

ನಟಿ ರಚಿತಾ ರಾಮ್ ಅವರು ‘ಲ್ಯಾಂಡ್​ ಲಾರ್ಡ್’ (Landlord Movie) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ರಚಿತಾ ರಾಮ್ (Rachita Ram) ಮಾತನಾಡಿದರು. ಈ ವೇಳೆ ಅವರು ದರ್ಶನ್ ಅವರಿಗೂ ಕೃತಜ್ಞತೆ ಸಲ್ಲಿಸಿದರು. ಆಗ ದರ್ಶನ್ ಅಭಿಮಾನಿಗಳು ‘ಬಾಸ್ ಬಾಸ್ ಡಿ ಬಾಸ್’ ಎಂದು ಜೈಕಾರ ಕೂಗಲು ಆರಂಭಿಸಿದರು. ‘ಒಂದು ನಿಮಿಷ ಅವಕಾಶ ಕೊಡಿ. ನಾನು ಮಾತನಾಡಿ ಮುಗಿಸುತ್ತೇನೆ’ ಎಂದು ರಚಿತಾ ರಾಮ್ ಮನವಿ ಮಾಡಿಕೊಂಡರು. ಆದರೂ ಕೂಡ ದರ್ಶನ್ ಫ್ಯಾನ್ಸ್ (Darshan Fans) ಚೀರಾಟ, ಕೂಗಾಟ ನಿಲ್ಲಿಸಲೇ ಇಲ್ಲ. ಆಗ ರಚಿತಾ ರಾಮ್ ಅವರು ಅರ್ಧದಲ್ಲೇ ಮಾತು ನಿಲ್ಲಿಸಿ ವೇದಿಕೆಯ ಕೆಳಗೆ ಕುಳಿತುಕೊಂಡರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.