ಅರ್ಜುನ ಆನೆಯ ಸಮಾಧಿ ವಿಚಾರ: ಅರಣ್ಯಾಧಿಕಾರಿಗಳ ನಡೆಗೆ ದರ್ಶನ್​ ಆಪ್ತರು ಗರಂ

|

Updated on: May 26, 2024 | 5:49 PM

8 ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸಮಾಧಿ ನಿರ್ಮಾಣಕ್ಕೆ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರು ಸಹಾಯ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ. ಅರಣ್ಯಾಧಿಕಾರಿಗಳು ಮೊದಲು ಅನುಮತಿ ನೀಡಿ, ನಂತರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ದರ್ಶನ್ ಆಪ್ತರು ಆರೋಪಿಸಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ..

ಅರ್ಜುನ ಆನೆ (Arjuna Elephant) ಸಮಾಧಿ ನಿರ್ಮಾಣಕ್ಕೆ ದರ್ಶನ್​ ಅವರು ಮುಂದಾಗಿದ್ದು, ಧನಸಹಾಯ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅರಣ್ಯಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದರ್ಶನ್​ (Darshan) ಆಪ್ತರಾದ ನಾಗರಾಜ್​ ಮಾತನಾಡಿದ್ದಾರೆ. ‘ನಾನು ದರ್ಶನ್​ ಅವರ ಸ್ನೇಹಿತ ನಾಗರಾಜ್​. ದರ್ಶನ್​ ಅವರ ಪರವಾಗಿ ಮಾತನಾಡುತ್ತಿದ್ದೇನೆ. ದರ್ಶನ್​ ಅವರು ಅನಧಿಕೃತವಾಗಿ ಕಲ್ಲುಗಳನ್ನು ಮತ್ತು ಹುಡುಗರನ್ನು ಕಳಿಸಿದ್ದಾರೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದೀರಲ್ಲ.. ಮಾಧ್ಯಮಗಳಲ್ಲಿ ನೋಡಿ ಪ್ರಸಾರ ಆಗಿದೆ. ಮೇ 2ರಂದು ದರ್ಶನ್​ ಅವರು ಅರ್ಜುನನ ಸಮಾಧಿ (Arjuna Elephant Samadhi) ಬಗ್ಗೆ ಒಂದು ಟ್ವೀಟ್​ ಮಾಡಿದ್ದರು. ಆ ಬಳಿಕ ಸರ್ಕಾರ, ಅರಣ್ಯ ಇಲಾಖೆ, ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಮಾವುತ ವಿನು ಮತ್ತು ಹುಡುಗರು ಎಎಸ್​ಎಫ್​ ಅವರಿಗೆ ಮನವಿ ಮಾಡಿಕೊಂಡು ಅನುಮತಿ ಪಡೆದರು. ಆ ಬಳಿಕ ದರ್ಶನ್​ ಅವರು ಹಣ ನೀಡಿ ನಮಗೆ ಕಲ್ಲುಗಳ ವ್ಯವಸ್ಥೆ ಮಾಡಿದರು. ಆ ಬಳಿಕವೇ ನಾವು ಕಾಡಿನ ಒಳಗೆ ಹೋಗಿದ್ದು. ಕೆಲಸ ಶುರುಮಾಡಿದಾಗ ಆರ್​ಎಫ್​ಓ ಅವರು ತಡೆದಿದ್ದೀರಿ. ಹಣ ವಾಪಸ್​ ಕೊಟ್ಟಿದ್ದೇವೆ ಅಂತ ನೀವು ಹೇಳುತ್ತಿದ್ದೀರಿ. ಆದರೆ ಅದು ಯಾವ ಖಾತೆಗೂ ಬಂದಿಲ್ಲ. ಆ ಹಣದ ಅವಶ್ಯಕತೆ ದರ್ಶನ್​ ಅವರಿಗೆ ಇಲ್ಲ. ತಾಯಿ ಚಾಮುಂಡೇಶ್ವರಿ ಅವರನ್ನು ಚೆನ್ನಾಗಿ ಇಟ್ಟಿದ್ದಾರೆ’ ಎಂದು ನಾಗರಾಜ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.