ಪತ್ನಿ ಕೊಟ್ಟ ಬ್ಯಾಗ್ ಹಿಡಿದು ಸೈಲೆಂಟ್ ಆಗಿ ಸೆಲ್ಗೆ ಹೋದ ದರ್ಶನ್; ಹೀಗಿದೆ ದಾಸನ ಸ್ಥಿತಿ
ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ಗೆ ಆತಂಕ ಹೆಚ್ಚಾಗಿದೆ. ಮುಂದೆ ಏನಾಗಲಿದೆಯೋ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ನೋಡಲು ವಿಜಯಲಕ್ಷ್ಮಿ ತೆರಳಿದ್ದಾರೆ. ಗಂಡನಿಗೆ ಕೆಲವು ಅಗತ್ಯ ವಸ್ತುಗಳನ್ನು ಅವರು ನೀಡಿದ್ದಾರೆ. ಪತ್ನಿಯ ಭೇಟಿ ಬಳಿಕ ದರ್ಶನ್ ಅವರು ಸೈಲೆಂಟ್ ಆಗಿ ಬ್ಯಾಗ್ ಹಿಡಿದುಕೊಂಡು ಸೆಲ್ಗೆ ಮರಳಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರನ್ನ ಭೇಟಿಯಾಗಲು ತೆರಳಿದ ವಿಜಯಲಕ್ಷ್ಮಿ ಅವರು ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಕೆಲವು ಅಗತ್ಯ ವಸ್ತುಗಳನ್ನು ಅವರು ದರ್ಶನ್ಗೆ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಕ್ತಾಯ ಆಗಿದ್ದು, ಚಾರ್ಜ್ಶೀಟ್ ಕೂಡ ಸಲ್ಲಿಕೆ ಆಗಿದೆ. ದರ್ಶನ್ ಅವರನ್ನು ನೋಡಲು ಬಳ್ಳಾರಿ ಜೈಲಿನ ಹೊರಗೆ ಅಭಿಮಾನಿಗಳು ಜಮಾಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.