‘ಅದು ಪರ್ಸನಲ್ ವಿಷಯ’: ದರ್ಶನ್ ಜೀವನದ ಬದಲಾವಣೆಗಳು ಬಗ್ಗೆ ಧನ್ವೀರ್ ಪ್ರತಿಕ್ರಿಯೆ

Edited By:

Updated on: Apr 01, 2025 | 10:14 PM

‘ಡಿ ಬಾಸ್’ ದರ್ಶನ್ ಜೊತೆಗೆ ನಟ ಧನ್ವೀರ್ ಗೌಡ ಹೆಚ್ಚು ಆಪ್ತತೆ ಹೊಂದಿದ್ದಾರೆ. ದರ್ಶನ್ ಅವರು ಜೈಲು ಸೇರಿದ್ದಾಗ ಧನ್ವೀರ್ ಗೌಡ ಮುಂದೆ ನಿಂತು ಸಾಕಷ್ಟು ಸಹಾಯ ಮಾಡಿದ್ದರು. ಜೈಲಿನಿಂದ ಹೊರಗೆ ಬಂದ ನಂತರ ದರ್ಶನ್ ಅವರ ಜೀವನದಲ್ಲಿ ಕೆಲವು ಬದಲಾವಣೆಗಳು ಆಗಿವೆ. ಆ ಕುರಿತು ಎದುರಾದ ಪ್ರಶ್ನೆಗೆ ಧನ್ವೀರ್ ಉತ್ತರಿಸಿದ್ದಾರೆ.

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಜೊತೆ ನಟ ಧನ್ವೀರ್ ಗೌಡ (Dhanveer Gowda) ಅವರು ಆಪ್ತತೆ ಹೊಂದಿದ್ದಾರೆ. ದರ್ಶನ್ ಜೈಲು ಸೇರಿದ್ದಾಗ ಧನ್ವೀರ್ ಗೌಡ ಅವರು ಸಾಕಷ್ಟು ಸಹಾಯ ಮಾಡಿದ್ದರು. ಜೈಲಿನಿಂದ ಹೊರಬಂದ ಬಳಿಕ ದರ್ಶನ್ (Darshan Thoogudeepa) ಬದುಕಿನಲ್ಲಿ ಒಂದಷ್ಟು ಬದಲಾವಣೆಗಳು ಆಗಿವೆ. ಆ ಕುರಿತು ಎದುರಾದ ಪ್ರಶ್ನೆಗೆ ಧನ್ವೀರ್ ಅವರು ಉತ್ತರ ನೀಡಿದ್ದಾರೆ. ‘ದರ್ಶನ್ ಅವರ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ನಾನು ಚರ್ಚೆ ಮಾಡಲ್ಲ. ಯಾಕೆಂದರೆ ಅದು ಅವರ ಪರ್ಸನಲ್ ವಿಷಯ. ಅದು ಅವರ ವೈಯಕ್ತಿಕ ನಿರ್ಧಾರಗಳು. ಈಗ ರಾಜಸ್ಥಾನದಲ್ಲಿ ಡೆವಿಲ್ ಸಿನಿಮಾದ ಶೂಟಿಂಗ್ ಮಾಡಿಕೊಂಡು ಆರಾಮಾಗಿದ್ದಾರೆ’ ಎಂದು ಧನ್ವೀರ್ ಗೌಡ ಹೇಳಿದ್ದಾರೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More