ದರ್ಶನ್ಗೆ 4 ಹೆಜ್ಜೆ ನಡೆಯಲೂ ಆಗ್ತಿಲ್ಲ; ಫ್ಯಾನ್ಸ್ ಕಣ್ಣೀರು ಹಾಕುವಂತಿದೆ ಈ ವಿಡಿಯೋ
ರಾಜನಂತಿದ್ದ ದರ್ಶನ್ ಅವರಿಗೆ ಈಗ ಕಷ್ಟಕಾಲ. ಜೊತೆಗೆ, ಆರೋಗ್ಯ ಕೂಡ ಕೈ ಕೊಟ್ಟಿದೆ. ನಾಲ್ಕು ಹೆಜ್ಜೆ ನಡೆಯಲು ಕೂಡ ಅವರು ಕಷ್ಟಪಡುತ್ತಿದ್ದಾರೆ. ಬಳ್ಳಾರಿ ಜೈಲಿನ ಈ ವಿಡಿಯೋ ನೋಡಿದರೆ ದರ್ಶನ್ ಅವರ ಅಭಿಮಾನಿಗಳಿಗೆ ಖಂಡಿತಾ ಕಣ್ಣೀರು ಬರುತ್ತದೆ. ತಮ್ಮ ನೆಚ್ಚಿನ ನಟನನ್ನು ಈ ಸ್ಥಿತಿಯಲ್ಲಿ ನೋಡಲು ಫ್ಯಾನ್ಸ್ಗೆ ನಿಜಕ್ಕೂ ಕಷ್ಟ ಆಗುತ್ತದೆ.
ತೀವ್ರ ಬೆನ್ನು ನೋವಿನಿಂದ ದರ್ಶನ್ ಅವರು ಬಳಲುತ್ತಿದ್ದಾರೆ. ವೀಕ್ಷಕರ ಕೊಠಡಿಯಿಂದ ತಮ್ಮ ಸೆಲ್ಗೆ ವಾಪಸ್ ತೆರಳುವಾಗ ದರ್ಶನ್ ಅವರು ನಡೆಯಲು ಸಾಧ್ಯವಾಗದೇ ಕಷ್ಟಪಟ್ಟಿದ್ದಾರೆ. ಬ್ಯಾಗ್ ಹಿಡಿದುಕೊಂಡು ನಡೆಯುವಾಗ ಎರಡು ಬಾರಿ ಅವರು ನಿಂತಲ್ಲೇ ನಿಂತಿದ್ದಾರೆ. ಬೆನ್ನು ನೋವಿನಿಂದ ದರ್ಶನ್ ಒದ್ದಾಡುತ್ತಿದ್ದಾರೆ. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ. ಈಗಾಗಲೇ ಅವರಿಗೆ ಎಮ್ಆರ್ಐ ಸ್ಕ್ಯಾನಿಂಗ್ ಮಾಡಲಾಗಿದೆ. ಜಾಮೀನು ಸಿಗಬಹುದು ಎಂದು ನಿರೀಕ್ಷಿಸಿದ್ದ ದರ್ಶನ್ ಅವರಿಗೆ ನಿರಾಸೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us