ಸುದೀಪ್ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್ ಮತ್ತು ದರ್ಶನ್ ತೂಗುದೀಪ ಇಬ್ಬರೂ ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ಗಳು. ಸುದೀಪ್ರನ್ನು ಸ್ಟಾರ್ ಆಗುವಂತೆ ಮಾಡಿದ್ದು ‘ಹುಚ್ಚ’ ಸಿನಿಮಾ. ಇದೇ ಸಿನಿಮಾದಲ್ಲಿ ದರ್ಶನ್ ಒಂದು ಪಾತ್ರಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ. ಆದರೆ ಅವರಿಗೆ ಆ ಪಾತ್ರ ಏಕೆ ಸಿಗಲಿಲ್ಲ? ನಿರ್ಮಾಪಕರು ಹೇಳಿದ್ದು ಹೀಗೆ.
ಕಿಚ್ಚ ಸುದೀಪ್ ಅವರು ಸ್ಟಾರ್ ನಟರಾಗುವಂತೆ ಮಾಡಿದ ಸಿನಿಮಾ ‘ಹುಚ್ಚ’. ಅದಕ್ಕೂ ಮುಂಚೆ ಕೆಲವು ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದರಾದರೂ ‘ಹುಚ್ಚ’ ಸಿನಿಮಾದಿಂದಲೇ ಸುದೀಪ್ ಮಾಸ್ ಪ್ರೇಕ್ಷಕರಿಗೆ ಹತ್ತಿರವಾಗಿದ್ದು, ವಿಶೇಷವೆಂದರೆ ಸುದೀಪ್ ಜೊತೆಗೆ ದರ್ಶನ್ ಸಹ ‘ಹುಚ್ಚ’ ಸಿನಿಮಾದಲ್ಲಿ ನಟಿಸಬೇಕಿತ್ತು. ‘ಹುಚ್ಚ’ ಸಿನಿಮಾದ ಚಿತ್ರೀಕರಣವಾಗುವಾಗ ಆ ಸಿನಿಮಾದ ನಿರ್ಮಾಪಕ ರೆಹಮಾನ್ ಅವರ ಬಳಿ ನಾಯಕನ ಗೆಳೆಯನ ಪಾತ್ರ ನೀಡುವಂತೆ ಅವಕಾಶ ಕೇಳಿದರಂತೆ. ಆದರೆ ಅದಾಗಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದ ಕಾರಣ ಹಾಗೂ ದರ್ಶನ್ ಕೇಳಿದ ಪಾತ್ರ ಮುಖ್ಯವಾದ ಪಾತ್ರ ಅಲ್ಲವಾಗಿದ್ದ ಕಾರಣ ಅವಕಾಶ ಕೊಡಲಿಲ್ಲವಂತೆ. ಆದರೆ ಇದರಿಂದಾಗಿ ದರ್ಶನ್, ರೆಹಮಾನ್ ಮೇಲೆ ಮುನಿಸಿಕೊಂಡಿದ್ದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

