ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ನ ನಿರ್ಮಾಪಕರು ಹೇಳಿದ್ದು ಒಂದೇ ಮಾತು
Darshan: ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ದರ್ಶನ್ ಅವರನ್ನು ನಾಯಕನನ್ನಾಗಿ ಮಾಡಿದ್ದು ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕ. ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷವಾದ ಬೆನ್ನಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ‘ಮೆಜೆಸ್ಟಿಕ್’ ನಿರ್ಮಾಪಕ ಚುಟುಕಾಗಿ ಮಾತನಾಡಿದರು.
ದರ್ಶನ್ (Darshan) ಅವರು ಕನ್ನಡ ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದಾರೆ. ದರ್ಶನ್ ಮೊದಲು ನಾಯಕ ನಟನಾಗಿ ನಟಿಸಿದ್ದು ‘ಮೆಜೆಸ್ಟಿಕ್’ ಸಿನಿಮಾನಲ್ಲಿ. ಆ ಸಿನಿಮಾ ದರ್ಶನ್ ಅವರನ್ನು ಸ್ಟಾರ್ ಅನ್ನಾಗಿಸಿತು. ಅಲ್ಲಿಯವರೆಗೂ ನಾಯಕ ನಟನಾಗಿ ನಟಿಸದಿದ್ದ ದರ್ಶನ್ ಅವರನ್ನು ನಾಯಕನನ್ನಾಗಿ ಮಾಡಿದ್ದು ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕ ರಾಮಮೂರ್ತಿ. ಇಂದು ದರ್ಶನ್ 25 ಕಾರ್ಯಕ್ರಮಕ್ಕೆ ಆಗಮಿಸಿದ್ದರು ರಾಮಮೂರ್ತಿ. ದರ್ಶನ್ ಒತ್ತಾಯದ ಮೇರೆಗೆ ವೇದಿಕೆ ಏರಿದ ನಿರ್ಮಾಪಕ ರಾಮಮೂರ್ತಿ ಹೆಚ್ಚೇನೂ ಮಾತನಾಡಲಿಲ್ಲ, ಬದಲಿಗೆ ‘ನಾನು ಕಲಾವಿದನೂ ಅಲ್ಲ, ರಾಜಕಾರಣಿಯೂ ಅಲ್ಲ ಹೆಚ್ಚು ಮಾತನಾಡಲು ಬರಲ್ಲ, ದರ್ಶನ್ ಹೂ ಅಂದರೆ ಈಗಲೂ ಸಿನಿಮಾ ಮಾಡ್ತೀನಿ’ ಎಂದಷ್ಟೆ ಹೇಳಿ ಹೊರಟೇ ಬಿಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ