ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರನ್ನು ಮುಕ್ತವಾಗಿ ಕೊಂಡಾಡಿದ ಗಾಲಿ ಜನಾರ್ಧನರೆಡ್ಡಿ

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರನ್ನು ಮುಕ್ತವಾಗಿ ಕೊಂಡಾಡಿದ ಗಾಲಿ ಜನಾರ್ಧನರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 17, 2024 | 6:53 PM

ಹನುಮ ಜನುಮ ಸ್ಥಳ ಅಂಜನಾದ್ರಿ ಒಂದು ಪುಣ್ಯಕ್ಷೇತ್ರವಾಗಿ ಮಾಡಲು ರೆಡ್ಡಿ ಅವರು ಸರ್ಕಾರವನ್ನು ಆಗ್ರಹಿಸಿದ್ದು ಸತ್ಯ ಮತ್ತು ಮುಖ್ಯಮಂತ್ರಿ ಅವರ ಬೇಡಿಕೆಯನ್ನು ಮನ್ನಿಸಿದ್ದಾರೆ. ಹಾಗಾಗಿ ಅವರ ಧೋರಣೆಯಲ್ಲಿ ಬದಲಾವಣೆಯೇ? ಶಿವಕುಮಾರ್ ಮತ್ತು ತನ್ನ ನಡುವೆ ಕಳೆದ ಎರಡೂವರೆ ದಶಕಗಳಿಂದ ಸ್ನೇಹವಿದೆ, ಆದರೆ ಹಾಗಂತ ತಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಅಂತ ಯಾರೂ ಭಾವಿಸಬಾರದು ಎನ್ನುತ್ತಾರೆ ರೆಡ್ಡಿ.

ಕೊಪ್ಪಳ: ಈ ಜನಾರ್ಧನ ರೆಡ್ಡಿಯವರನ್ನು (Janardhan Reddy) ಅರ್ಥ ಮಾಡಿಕೊಳ್ಳುವುದು ಕಷ್ಟ ಮಾರಾಯ್ರೇ! ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ನೇತೃತ್ವದಲ್ಲಿ ಭಾರತ ಅಪಾರ ಅಭಿವೃದ್ಧಿ ಸಾಧಿಸುತ್ತಿದೆ ಎನ್ನುತ್ತಾ ತನ್ನ ಬೆಂಬಲ ಯಾವತ್ತಿಗೂ ಅವರಿಗೆ ಮಾತ್ರ ಎನ್ನುತ್ತಾರೆ. ಆದರೆ ತಮ್ಮ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಿಜೆಪಿ ಜೊತೆ ವಿಲೀನ ಆಗೋದಾಗಲಿ, ತಾವು ಬಿಜೆಪಿ ಸೇರೋದಾಗಲಿ ಸಾಧ್ಯವಿಲ್ಲ ಅನ್ನುತ್ತಾರೆ. ಇವತ್ತು ಅವರು ಕೊಪ್ಪಳದಲ್ಲಿ ಮಾತಾಡುವಾಗ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಗುಣಗಾನ ಮಾಡಿದರು. ಕ್ಷೇತ್ರದ ಸಲುವಾಗಿ ತಾನು ಯಾವುದೇ ಬೇಡಿಕೆ ತೆಗೆದುಕೊಂಡು ಹೋದಾಗ ಅವರಿಬ್ಬರು ಬಹಳ ಚೆನ್ನಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು. ನಿನ್ನೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ರೂ. 100 ಕೋಟಿ ಘೋಷಿಸಿರುವುದು ರೆಡ್ಡಿಯವಲ್ಲಿ ಸಂತಸ ಮೂಡಿದೆ. ಹನುಮ ಜನುಮ ಸ್ಥಳ ಅಂಜನಾದ್ರಿ ಒಂದು ಪುಣ್ಯಕ್ಷೇತ್ರವಾಗಿ ಮಾಡಲು ಅವರು ಸರ್ಕಾರವನ್ನು ಆಗ್ರಹಿಸಿದ್ದು ಸತ್ಯ ಮತ್ತು ಮುಖ್ಯಮಂತ್ರಿ ಅವರ ಬೇಡಿಕೆಯನ್ನು ಮನ್ನಿಸಿದ್ದಾರೆ. ಹಾಗಾಗಿ ಅವರ ಧೋರಣೆಯಲ್ಲಿ ಬದಲಾವಣೆಯೇ? ಶಿವಕುಮಾರ್ ಮತ್ತು ತನ್ನ ನಡುವೆ ಕಳೆದ ಎರಡೂವರೆ ದಶಕಗಳಿಂದ ಸ್ನೇಹವಿದೆ, ಆದರೆ ಹಾಗಂತ ತಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಅಂತ ಯಾರೂ ಭಾವಿಸಬಾರದು, ತಾನು ಬಿಜೆಪಿ ಮತ್ತು ಕಾಂಗ್ರೆಸ್-ಎರಡನ್ನೂ ಸೇರಲ್ಲ ಎಂದು ಜನಾರ್ಧನ ರೆಡ್ಡಿ ಸ್ಪಷ್ಟವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ