AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಾರ್ಧನ ರೆಡ್ಡಿ ಬಿಜೆಪಿ ಸೇರುವ ಸಾಧ್ಯತೆ ಬಗ್ಗೆ ಶ್ರೀರಾಮುಲು ತಮ್ಮ ಅಭಿಪ್ರಾಯ ಹೇಳೋದೇ ಇಲ್ಲ!

ಜನಾರ್ಧನ ರೆಡ್ಡಿ ಬಿಜೆಪಿ ಸೇರುವ ಸಾಧ್ಯತೆ ಬಗ್ಗೆ ಶ್ರೀರಾಮುಲು ತಮ್ಮ ಅಭಿಪ್ರಾಯ ಹೇಳೋದೇ ಇಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 25, 2023 | 7:18 PM

ಜನಾರ್ಧನರೆಡ್ಡಿಯವರನ್ನು ಬಿಜೆಪಿ ಕರೆತರಲು ಶ್ರೀರಾಮುಲು ಹಿಂದೆ ಪ್ರಯತ್ನ ಮಾಡಿದ್ದು ಸುಳ್ಳಲ್ಲ. ಅದರೆ ಪಕ್ಷದ ವರಿಷ್ಠರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗೇ ಅವರು ಆ ನಿಟ್ಟಿನಲ್ಲಿ ಮುಂದುವರಿಯುವುದು ಇಷ್ಟಪಡಲಿಲ್ಲ. ಬಿಜೆಪಿ ಬಗ್ಗೆ ಇದೇ ಕಾರಣಕ್ಕೆ ರೆಡ್ಡಿಯವರಲ್ಲಿ ತೀವ್ರ ಅಸಮಾಧಾನವಿದೆ ಮತ್ತು ಈ ಹಿನ್ನೆಲೆಯಲ್ಲೇ ಅವರು ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದು.

ಬಳ್ಳಾರಿ: ಬಳ್ಳಾರಿ (Ballari) ಜಿಲ್ಲೆಯ ಪ್ರಮುಖ ನಾಯಕರಾದ ಬಿ ಶ್ರೀರಾಮುಲು (B Sriramulu) ಮತ್ತು ಕೆಆರ್ ಪಿಪಿಯ ನಾಯಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ನಡುವೆ ಈಗ ಸ್ನೇಹವಿದೆಯೋ, ದ್ವೇಷವೋ, ಅಸಮಾಧಾನವೋ ಕೋಪವೋ ಅರ್ಥವಾಗದು ಮಾರಾಯ್ರೇ. ರೆಡ್ಡಿ ಈಗ ಗಂಗಾವತಿಯಲ್ಲಿ ವಾಸವಾಗಿರೋದು ಬೇರೆ ವಿಚಾರ ಮತ್ತು ಅದಕ್ಕೆ ಬೇರೆ ಕಾರಣಗಳಿವೆ. ರೆಡ್ಡಿಯನ್ನು ಶ್ರೀರಾಮುಲು ಬಗ್ಗೆ ಕೇಳಿದರೆ ಅವರು ಯಾವುದೇ ಪಕ್ಷದಲ್ಲಿದ್ದರೂ ನೆಮ್ಮದಿಯಿಂದ ಇರಲಿ ಅನ್ನುತ್ತಾರೆ. ಇತ್ತ ಬಳ್ಳಾರಿಯಲ್ಲಿ ಶ್ರೀರಾಮುಲು ಅವರಿಗೆ ರೆಡ್ಡಿಯವರನ್ನು ಪಕ್ಷಕ್ಕೆ ಕರೆತರುತ್ತೀರಾ? ಅವರು ಬಂದರೆ ಸ್ವಾಗತಿಸುತ್ತೀರಾ ಅಂತ ಮಾಧ್ಯಮದವರು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಬಿಜೆಪಿ ಲಕ್ಷಾಂತರ ಕಾರ್ಯಕರ್ತರನ್ನು ಒಳಗೊಂಡ ಬಹು ದೊಡ್ಡ ಪಕ್ಷ, ಒಬ್ಬ ಶ್ರೀರಾಮುಲು ಹೇಳಿದರೆ ಏನೂ ಆಗದು, ಅವರನ್ನು ಪಕ್ಷಕ್ಕೆ ಬರೋದಾದ್ರೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ, ತನ್ನೊಬ್ಬನ ಅಭಿಪ್ರಾಯದಿಂದ ಏನೂ ಆಗಲ್ಲ ಎಂದು ಹೇಳುತ್ತಾರೆ. ಶ್ರೀರಾಮುಲು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಲು ಮುಂದಾಗುವುದೇ ಇಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ