ಪಾರ್ಟಿ ಬದಲಿಸಿ ಸ್ನೇಹಿತರ ದೂಷಿಸಿದ ಸಂಗೀತಾಗೆ ಕಿಚ್ಚನ ಮಾತಿನ ಪೆಟ್ಟು

ಪಾರ್ಟಿ ಬದಲಿಸಿ ಸ್ನೇಹಿತರ ದೂಷಿಸಿದ ಸಂಗೀತಾಗೆ ಕಿಚ್ಚನ ಮಾತಿನ ಪೆಟ್ಟು

ಮಂಜುನಾಥ ಸಿ.
|

Updated on: Nov 25, 2023 | 5:36 PM

Bigg Boss Kannada: ಬಿಗ್​ಬಾಸ್​ ಮನೆಯಲ್ಲಿ ತನ್ನ ವೈರಿಗಳು ಎನ್ನುತ್ತಿದ್ದವರ ಜೊತೆಗೆ ಸೇರಿಕೊಂಡು ತಮ್ಮ ಗೆಳೆಯರಾಗಿದ್ದವರನ್ನೇ ದೂಷಿಸುತ್ತಿದ್ದಾರೆ ಸಂಗೀತ. ಈ ಬಗ್ಗೆ ಕಿಚ್ಚ ಸುದೀಪ್​ ಪ್ರಶ್ನೆಗೆ ಸಂಗೀತಾ ಬಳಿ ಉತ್ತರವೇ ಇಲ್ಲ.

ಬಿಗ್​ಬಾಸ್ ಕನ್ನಡ ಸೀಸನ್ 10 (Bigg Boss) ಆರಂಭವಾದಾಗ ಸಂಗೀತಾ ಶೃಂಗೇರಿ (Sangeetha Sringeri) ಆಟದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಂಗೀತಾ, ಕರ್ನಾಟಕದ ಹೊಸ ಕ್ರಶ್ ಎಂದು ಕೊಂಡಾಡಿದ್ದರು. ಆದರೆ ಆಟ ಮುಂದೆ ಸಾಗಿದಂತೆ ಸಂಗೀತಾರ ವ್ಯಕ್ತಿತ್ವ ನಿಧಾನಕ್ಕೆ ಅನಾವರಣವಾಗುತ್ತಾ ಹೋಯ್ತು. ಇಷ್ಟು ದಿನ ಯಾವ ಗುಂಪನ್ನು ವಿರೋಧಿಸುತ್ತಿದ್ದರೋ ಅವರೊಟ್ಟಿಗೆ ಸೇರಿಕೊಂಡಿರುವ ಸಂಗೀತಾ ಇಷ್ಟು ದಿನ ಯಾರನ್ನು ಗೆಳೆಯರು, ಆತ್ಮೀಯರು ಎನ್ನುತ್ತಿದ್ದರೋ ಅವರನ್ನೇ ದೂಷಿಸುತ್ತಿದ್ದಾರೆ. ಇಂದು ವೀಕೆಂಡ್ ಪಂಚಾಯ್ತಿಯ ಮೊದಲ ದಿನ ಸುದೀಪ್, ಈ ಬಗ್ಗೆ ಸಂಗೀತಾರನ್ನು ಪ್ರಶ್ನಿಸಿದ್ದು, ಉತ್ತರ ನೀಡಲಾಗದೆ ಸಂಗೀತಾ ಮೌನಕ್ಕೆ ಜಾರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ