ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ತಂಡೋಪ ತಂಡವಾಗಿ ತೆರಳಿದ ಗದಗ ಜನ

ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ತಂಡೋಪ ತಂಡವಾಗಿ ತೆರಳಿದ ಗದಗ ಜನ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 17, 2024 | 6:59 PM

ಗದಗ(Gadag) ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕಾರ್ಯಕರ್ತರೆಲ್ಲರೂ ಸೇರಿಕೊಂಡು 200 ಕ್ಕೂ‌ಹೆಚ್ಚು ಭಕ್ತರು ಆಸ್ಥಾ ವಿಶೇಷ ರೈಲಿನಲ್ಲಿ ಪ್ರಯಾಣ  ಬೆಳಸಿದ್ದಾರೆ. ಅಯ್ಯೋಧ್ಯೆ ಶ್ರೀರಾಮನ ದರ್ಶನಕ್ಕೆ ತೆರಳಿದ್ದಾರೆ. ಬೆಳಗಾವಿಯಿಂದ ಗದಗ ಮಾರ್ಗವಾಗಿ ನೇರವಾಗಿ ಅಯೋಧ್ಯೆಗೆ ವಿಶೇಷ ರೈಲು ಮೂಲಕ ತಲುಪಲಿದ್ದಾರೆ.

ಗದಗ, ಫೆ.17: ಅಯ್ಯೋಧ್ಯೆ(Ayodhya)ಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಆಗಿ ಹಲವು ದಿನಗಳು ಕಳೆದಿವೆ. ಈ ಹಿನ್ನಲೆ ಭಕ್ತರು ಗದಗದಿಂದ ಅಯೋಧ್ಯೆಗೆ ತಂಡೋಪ ತಂಡವಾಗಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಸಂಘಟನೆ ವತಿಯಿಂದ ಅಯೋಧ್ಯೆ ಯಾತ್ರೆ ಆಯೋಜನೆ ಮಾಡಲಾಗಿದ್ದು, ಗದಗ(Gadag) ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕಾರ್ಯಕರ್ತರೆಲ್ಲರೂ ಸೇರಿಕೊಂಡು 200 ಕ್ಕೂ‌ಹೆಚ್ಚು ಭಕ್ತರು ಆಸ್ಥಾ ವಿಶೇಷ ರೈಲಿನಲ್ಲಿ ಪ್ರಯಾಣ  ಬೆಳಸಿದ್ದಾರೆ. ಉತ್ತರ ಪ್ರಾಂತದಿಂದ ಒಟ್ಟು 1350 ಸೀಟುಗಳು ಬುಕ್ಕಿಂಗ್ ಆಗಿದ್ದು, ಬೆಳಗಾವಿಯಿಂದ ಗದಗ ಮಾರ್ಗವಾಗಿ ನೇರವಾಗಿ ಅಯೋಧ್ಯೆಗೆ ವಿಶೇಷ ರೈಲು ಮೂಲಕ ತಲುಪಲಿದ್ದಾರೆ. ಇನ್ನು ಗದಗ ರೈಲ್ವೆ ನಿಲ್ದಾಣದಲ್ಲಿ ಜೈ ಶ್ರೀರಾಮ ಘೋಷಣೆಯೊಂದಿಗೆ ಯಾತ್ರಿಕರು ಪ್ರಯಾಣ ಬೆಳಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Feb 17, 2024 06:56 PM