ದರ್ಶನ್ ಹಾಗೂ ಯಶ್ ಮಾಡಿದ ಸಹಾಯ ನೆನಪು ಮಾಡಿಕೊಂಡ ಸುಮಲತಾ
Darshan-Yash: ದರ್ಶನ್ 25 ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದ ನಟಿ, ಸಂಸದೆ ಸುಮಲತಾ, ಕಳೆದ ಲೋಕಸಭೆ ಚುನಾವಣೆ ನೆನಪು ಮಾಡಿಕೊಂಡರು.
ನಿನ್ನೆಯಷ್ಟೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ ನಟ ದರ್ಶನ್ (Darshan Thoogudeepa). ಇದರ ನಡುವೆ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ ದರ್ಶನ್. ಇದರ ಪ್ರಯುಕ್ತ ಶ್ರೀರಂಗಪಟ್ಟಣದಲ್ಲಿ ದರ್ಶನ್ 25 ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಲವು ಮಠಾಧಿಪತಿಗಳು, ರಾಜಕೀಯ ಮುಖಂಡರು, ಕನ್ನಡ ಚಿತ್ರರಂಗದ ನಟರು, ನಟಿಯರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಟಿ, ಸಂಸದೆ ಸುಮಲತಾ ಸಹ ಭಾಗಿಯಾಗಿದ್ದು, ದರ್ಶನ್ ಬಗ್ಗೆ, ಅವರ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿದರು. ಈ ವೇಳೆ ಕಳೆದ ಲೋಕಸಭೆ ಚುನಾವಣೆಯಲ್ಲಿ ನಟ ದರ್ಶನ್ ಹಾಗೂ ಯಶ್ ತಮ್ಮ ಪರವಾಗಿ ಮಾಡಿ ಪ್ರಚಾರ, ತಮಗೆ ತುಂಬಿದ ಧೈರ್ಯದ ಬಗ್ಗೆ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos