‘ಈ ಸ್ಥಿತಿ ಬಂದಿದ್ದಕ್ಕೆ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’: ವಕೀಲರ ಮಾತು
ದರ್ಶನ್ ಅವರನ್ನು ಬಂಧಿಸಿ ತಿಂಗಳಾಗುತ್ತಾ ಬಂದಿದೆ. ಮೊದಲು ಕೆಲವು ದಿನ ದರ್ಶನ್ ಅವರನ್ನು ತೀವ್ರವಾಗಿ ವಿಚಾರಣೆ ಮಾಡಲಾಯಿತು. ಆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈಗ ದರ್ಶನ್ ಅವರು ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಅವರು ಜೈಲಿನಲ್ಲಿ ಸಾಕಷ್ಟು ನೋವಿನಲ್ಲಿದ್ದಾರಂತೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರು ಸದ್ಯ ಕೇಂದ್ರ ಕಾರಾಗೃಹದಲ್ಲಿದ್ದಾರೆ. ನಿತ್ಯವೂ ಅವರು ಕಂಬಿಗಳ ಮಧ್ಯೆ ಸಮಯ ಕಳೆಯಬೇಕಿದೆ. ದರ್ಶನ್ ಅವರಿಗೆ ಜೈಲುವಾಸ ನರಕಯಾತನೆ ಅನಿಸುತ್ತಿದೆ. ಈ ಬಗ್ಗೆ ಅವರ ಪರ ವಕೀಲರು ಮಾತನಾಡಿದ್ದಾರೆ. ‘ದರ್ಶನ್ ಅವರು ಬೇಸರದಲ್ಲಿದ್ದಾರೆ. ಅವರಿಗೆ ಸಾಕಷ್ಟು ನೋವಿದೆ. ಅವರು ಸಾಕಷ್ಟು ಕಷ್ಟಪಟ್ಟು ಸ್ಟಾರ್ಪಟ್ಟ ಪಡೆದಿದ್ದಾರೆ. ಈಗ ಇಂಥ ಆರೋಪ ಬಂದಿದ್ದಕ್ಕೆ ಅವರಿಗೆ ನೋವಿದೆ. ಅವರು ಹೊರಗೆ ಬಂದೇ ಬರುತ್ತಾರೆ. ಸಿನಿಮಾ ಮಾಡಿಯೇ ಮಾಡುತ್ತಾರೆ. ಅವರ ಅಭಿಮಾನಿಗಳು ಇಟ್ಟಿರೋ ಗೌರವದಿಂದ ಮತ್ತೊಂದು ಹಂತಕ್ಕೆ ಹೋಗುತ್ತಾರೆ’ ಎಂದಿದ್ದಾರೆ ವಕೀಲರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos