ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ತೂಗುದೀಪ ಅವರ ಗೆಳೆಯರ ಬಗ್ಗೆ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಗೆಳೆಯರ ಸಹವಾಸದಿಂದಲೇ ದರ್ಶನ್ ಹೀಗಾಗಿದ್ದಾರೆ ಎನ್ನಲಾಗುತ್ತಿದೆ. ಇದೀಗ ದರ್ಶನ್ರ ಹಳೆಯ ಭದ್ರತಾ ಸಿಬ್ಬಂದಿ, ದರ್ಶನ್ ಗೆಳೆಯರು ತಮಗೆ ಕೊಟ್ಟ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಜೈಲು ಸೇರಿದ್ದಾರೆ. ಈ ಸಂದರ್ಭದಲ್ಲಿ ಹಲವರು ದರ್ಶನ್ ಬಗ್ಗೆ ಮಾತನಾಡುತ್ತಿದ್ದು, ದರ್ಶನ್ರ ಗೆಳೆಯರಿಂದಲೇ ಅವರಿಗೆ ಈ ಗತಿ ಬಂದಿದೆ ಎನ್ನುತ್ತಿದ್ದಾರೆ. ದರ್ಶನ್ ಸುತ್ತ-ಮುತ್ತ ಇದ್ದ ಗೆಳೆಯರು ಸರಿಯಿಲ್ಲ ಹಾಗಾಗಿ ದರ್ಶನ್ ಸಹ ಅದೇ ರೀತಿ ಆದರು ಎನ್ನುತ್ತಿದ್ದಾರೆ. ಇದೀಗ ದರ್ಶನ್ ಮನೆಗೆ ಭದ್ರತೆ ಒದಗಿಸುತ್ತಿದ್ದ ಭದ್ರತಾ ಸಂಸ್ಥೆಯ ಮಾಲೀಕ ದರ್ಶನ್ ಗೆಳೆಯರು ಭದ್ರತಾ ಸಿಬ್ಬಂದಿಗೆ ನೀಡಿದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಗೆಳೆಯರು ಕುಡಿದು ಬಂದು ಸಾಕಷ್ಟು ಬಾರಿ ನಮ್ಮ ಸಿಬ್ಬಂದಿ ಜೊತೆ ಜಗಳ ಮಾಡಿದ್ದಾರೆ. ಕೋಟಿ ಕೊಟ್ಟರೂ ಸಹ ದರ್ಶನ್ ಮನೆಯಲ್ಲಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ ಭದ್ರತಾ ಸಿಬ್ಬಂದಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos