‘ನ್ಯಾಯ ಕೇಳಲು ಹೋಗಿದ್ದ ನಮ್ಮ ಮೇಲೆ ನಾಯಿ ಛೂ ಬಿಟ್ಟಿದ್ದ ದರ್ಶನ್’
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ದರ್ಶನ್ ತೂಗುದೀಪ ಅವರ ಹಳೆಯ ಪ್ರಕರಣವೊಂದು ಹೊರಬಂದಿದೆ. ನ್ಯಾಯ ಕೇಳಲು ಹೋದ ಜನರ ಮೇಲೆ ನಾಯಿ ಛೂ ಬಿಟ್ಟಿದ್ದರಂತೆ ನಟ ದರ್ಶನ್.
ರೇಣುಕಾ ಸ್ವಾಮಿ (Renuka Swamy) ಕೊಲೆ ಕೇಸಿನಲ್ಲಿ ಬಂಧಿತವಾಗಿರುವ ದರ್ಶನ್ ರ (Darshan) ಕೆಲವು ಹಳೆ ಪ್ರಕರಣಗಳು ಸಹ ಹೊರಗೆ ಬರುವ ಮುನ್ಸೂಚನೆ ಸಿಕ್ಕಿದೆ. 10 ವರ್ಷದ ಹಿಂದೆ ದರ್ಶನ್ನಿಂದ ಆಗಿದೆ ಎನ್ನಲಾಗುತ್ತಿರುವ ಅನ್ಯಾಯದ ಬಗ್ಗೆ ಕುಟುಂಬವೊಂದು ಬಹಿರಂಗಪಡಿಸಿದೆ. ಟಿ.ನರಸೀಪುರದ ಬಳಿ ಇದ್ದ ದರ್ಶನ್ರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ದರ್ಶನ್ರ ಎತ್ತು ಕಣ್ಣಿಗೆ ತಿವಿದಿತ್ತು. ಎತ್ತಿನ ಕೊಂಬು ಕಣ್ಣಿನಿಂದ ಹಾದು ತಲೆ ಹಿಂಭಾಗದಿಂದ ಹೊರಗೆ ಬಂದಿತ್ತು. ಆ ವ್ಯಕ್ತಿ ಸ್ವಾಧೀನವನ್ನೇ ಕಳೆದುಕೊಂಡು ಜೀವಂತ ಶವವಾಗಿ ಇಂದಿಗೂ ಹಾಸಿಗೆಯಲ್ಲಿದ್ದಾರೆ. ಆ ವ್ಯಕ್ತಿಗೆ ಆದ ಅನ್ಯಾಯಕ್ಕೆ ಪರಿಹಾರ ಕೇಳುವಂತೆ ಹೋದ ಅವರ ಸಂಭದಿಕರ ಮೇಲೆ ದರ್ಶನ್ ತನ್ನ ಸಾಕು ನಾಯಿಗಳನ್ನು ಛೂ ಬಿಟ್ಟಿದ್ದರಂತೆ. ಅಲ್ಲದೆ, ಮೈಸೂರಿನ ಹೋಟೆಲ್ ಒಂದನ್ನು ಸಂಧಾನಕ್ಕೆಂದು ಕರೆದುಕೊಂಡು ಬಂದು, ಪ್ರತಿಭಟನೆ ಏನಾದರೂ ಮಾಡಿದರೆ ಹುಷಾರ್ ಎಂದು ರೌಡಿಗಳಿಂದ ಬೆದರಿಕೆ ಹಾಕಿಸಿದ್ದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 13, 2024 03:01 PM