‘ಅವನಿಗೆ ಧಮ್ ಇದ್ರೆ ಹೊರಗೆ ಬಂದಾಗ ನನ್ನ ಫೇಸ್ ಮಾಡಲಿ’: ಧನ್ವೀರ್ ಬಗ್ಗೆ ದರ್ಶನ್ ಗರಂ

Edited By:

Updated on: Oct 27, 2026 | 9:08 PM

ದರ್ಶನ್ ಕುಟುಂಬ ಹಾಗೂ ಧನ್ವೀರ್ ನಡುವೆ ಕಿರಿಕ್ ಆಗಿದೆ. ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಬಯಲಾಗಿದೆ. ಈ ಬಗ್ಗೆ ಮಾತನಾಡುವಾಗ ಧನ್ವೀರ್ ಅವರು ಅನೇಕರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಆಡಿಯೋ ವೈರಲ್ ಆಗಿವೆ. ಈ ಕುರಿತು ಝೈದ್ ಖಾನ್ ಅವರು ಜೈಲಿನಲ್ಲಿ ಇರುವ ದರ್ಶನ್ ಜತೆ ಮಾತನಾಡಿದ್ದಾರೆ.

ನಟ ದರ್ಶನ್ ಕುಟುಂಬ ಹಾಗೂ ಧನ್ವೀರ್ ಗೌಡ ನಡುವೆ ಕಿರಿಕ್ ಆಗಿದೆ. ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಈಗ ಬಯಲಾಗಿದೆ. ಈ ಬಗ್ಗೆ ಮಾತನಾಡುವಾಗ ಧನ್ವೀರ್ ಅವರು ಅನೇಕರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಆಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಕುರಿತು ನಟ ಝೈದ್ ಖಾನ್ ಅವರು ಜೈಲಿನಲ್ಲಿ ಇರುವ ದರ್ಶನ್ ಜೊತೆ ಮಾತನಾಡಿದ್ದಾರೆ. ಅಲ್ಲಿ ನಡೆದ ಮಾತುಕಥೆಯ ಬಗ್ಗೆ ಅವರು ಮಾಧ್ಯಮಗಳ ಎದುರು ಮಾಹಿತಿ ಹಂಚಿಕೊಂಡಿದ್ದಾರೆ. ‘ಖಂಡಿತವಾಗಿಯೂ ದೂರು ನೀಡುವುದಾಗಿ ದರ್ಶನ್ ಅವರು ತಿಳಿಸಿದ್ದಾರೆ. ಅಭಿಮಾನಿಗಳು ಚಿಂತೆ ಮಾಡುವುದು ಬೇಡ ಎಂದಿದ್ದಾರೆ. ಆದಷ್ಟು ಬೇಗ ಆಚೆ ಬರುತ್ತೇನೆ. ಅವನಿಗೆ ಧಮ್ ಇದ್ದರೆ ನಾನು ಆಚೆ ಬಂದಾಗ ನನ್ನನ್ನು ಫೇಸ್ ಮಾಡಲಿ ಎಂದಿದ್ದಾರೆ’ ಎಂದು ಝೈದ್ ಖಾನ್ ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More