AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಿಂದಲೇ ಧನ್ವೀರ್​ಗೆ ದರ್ಶನ್ ವಾರ್ನಿಂಗ್: ಝೈದ್ ಖಾನ್ ಭೇಟಿ ಬಳಿಕ ಮಾಹಿತಿ

ದರ್ಶನ್ ಕುಟುಂಬ ಹಾಗೂ ಧನ್ವೀರ್ ಗೌಡ ನಡುವಿನ ಗಲಾಟೆ ಈಗ ಬಹಿರಂಗ ಆಗಿದೆ. ಈ ವಿಚಾರವಾಗಿ ಮಾತನಾಡಲು ವಿಜಯಲಕ್ಷ್ಮಿ ಮತ್ತು ಝೈದ್ ಖಾನ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಕೆಲವು ಪ್ರಮುಖ ವಿಚಾರಗಳನ್ನು ಝೈದ್ ಖಾನ್ ಅವರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜೈಲಿನಿಂದಲೇ ಧನ್ವೀರ್​ಗೆ ದರ್ಶನ್ ವಾರ್ನಿಂಗ್: ಝೈದ್ ಖಾನ್ ಭೇಟಿ ಬಳಿಕ ಮಾಹಿತಿ
Zaid Khan, Darshan, Dhanveer GowdaImage Credit source: Tv9 Kannada
ರಾಮು, ಆನೇಕಲ್​
| Edited By: |

Updated on: Oct 27, 2026 | 7:20 PM

Share

ಜೈಲಿನಿಂದಲೇ ಧನ್ವೀರ್ ಗೌಡಗೆ ನಟ ದರ್ಶನ್ ಅವರು ವಾರ್ನಿಂಗ್ ನೀಡಿದ್ದಾರೆ. ಈ ಬಗ್ಗೆ ನಟ ಝೈದ್ ಖಾನ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ ಬಳಿಕ ಝೈದ್ ಖಾನ್ ಅವರು ಹೇಳಿಕೆ ನೀಡಿದ್ದಾರೆ. ‘ಧನ್ವೀರ್​ಗೆ ವಾರ್ನಿಂಗ್ ಕೊಡೋಕೆ ದರ್ಶನ್ ಹೇಳಿದ್ದಾರೆ. ನಾನು ಒಳಗಡೆ ಇದ್ದಾಗ ನನ್ನ ಹೆಂಡತಿ, ಮಕ್ಕಳ ಬಗ್ಗೆ ಮಾತಾಡೋದು ತಪ್ಪು. ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರಿಗೂ ಅಧಿಕಾರ ಇಲ್ಲ. ನಾನು ಹೊರಗೆ ಬಂದ ಮೇಲೆ ಧೈರ್ಯ ಇದ್ದರೆ ನನ್ನ ಮುಂದೆ ಮಾತಾಡಲಿ’ ಎಂದು ದರ್ಶನ್ ಹೇಳಿರುವುದಾಗಿ ಝೈದ್ ಖಾನ್ ತಿಳಿಸಿದ್ದಾರೆ.

‘ಫೋನ್‌ನಲ್ಲಿ ಎಲ್ಲೋ ಒಂದು ಕಡೆ ಕುಳಿತುಕೊಂಡು ಮಾತಾಡೋದಲ್ಲ. ಜನರಿಗೆ, ಅಭಿಮಾನಿಗಳಿಗೆ ತಪ್ಪು ಮೆಸೇಜ್ ಕೊಡುತ್ತಾ ಇದ್ದಾನೆ. ಎಲ್ಲರನ್ನು ಡೈವರ್ಟ್ ಮಾಡುವ ಕೆಲಸ ಮಾಡುತ್ತಿದ್ದಾನೆ. ಇವನು ಎಲ್ಲವನ್ನೂ ನಾನು ಮಾಡ್ದೇ ಅಂತಾನೆ. ಇವನನ್ನ ಕೇಳಿಕೊಂಡ ಅಕ್ಕ ಹಾಗೂ ದರ್ಶನ್ ಅಣ್ಣ ಹೋಗಿದ್ರಾ? ಸಹಾಯ ಮಾಡಿ ಅಂತ ಅಣ್ಣ ಕೂಡ ಅವನ ಹತ್ತಿರ ಹೋಗಿಲ್ಲ’ ಎಂದು ಧನ್ವೀರ್ ಅವರು ಹೇಳಿದ್ದಾರೆ.

‘ತಾನೇ ಸಹಾಯ ಮಾಡ್ತೀನಿ ಅಂತ ಮನೆಗೆ ನುಗ್ಗಿ, ಮನೆ ಹಾಳು ಮಾಡಿದ್ದಾನೆ. ನಾವು ಎಲ್ಲರೂ ಮಾಡುತ್ತಾ ಇರುವುದು ದರ್ಶನ್ ಅಣ್ಣನಿಗೋಸ್ಕರ. ಅವರು ಪ್ರೀತಿಸುವ ಪತ್ನಿ, ಮಗನ ಬಗ್ಗೆ ಮಾತಾಡಿದರೆ ಸರಿಯಲ್ಲ. ಧನ್ವೀರ್ ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದಾನೆ’ ಎಂದು ಝೈದ್ ಖಾನ್ ಅವರು ಹೇಳಿದ್ದಾರೆ.

‘ಜೈಲಿನಿಂದಲೇ ಧನ್ವೀರ್ ವಿರುದ್ದ ದರ್ಶನ್ ದೂರು ನೀಡುತ್ತಾರೆ. ವಕೀಲರ ಜೊತೆ ಚರ್ಚೆ ಮಾಡಿದ್ದಾರೆ. ಈಗ ದೂರನ್ನು ಕೊಡುತ್ತಾರೆ. ತಾವೇ ಮಾತಾಡಿದರೆ ಅಭಿಮಾನಿಗಳಿಗೆ ಗೊಂದಲ ಕ್ಲಿಯರ್ ಆಗುತ್ತೆ ಅಂತ ಅವರು ಹೇಳಿದ್ದಾರೆ. ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನೀವು ತಲೆಕೆಡಿಸಿಕೊಳ್ಳಬೇಡಿ. ಅಭಿಮಾನಿಗಳು ಧೈರ್ಯವಾಗಿ, ಆರಾಮಾಗಿರಿ ಅಂದಿದ್ದಾರೆ’ ಎಂದು ಝೈದ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ಲ ಎಂಬ ಆರೋಪಕ್ಕೆ ಲಾಯರ್ ಪ್ರತಿಕ್ರಿಯೆ

‘ಹಣಕಾಸಿನ ವಿಚಾರ ಅಣ್ಣನಿಗೆ ದೊಡ್ಡ ಮ್ಯಾಟರ್ ಅಲ್ಲ. ಅವರು ಈಗ ಜೈಲಿನಲ್ಲಿ ಇದ್ದಾರೆ. ಅವರಿಗೆ ಕೆಲಸ ಇಲ್ಲ. ಕೆಲಸ ಮಾಡಿದ್ರೆನೇ ಅವರಿಗೆ ಹಣ ಬರುವುದು. ಕೇಸ್ ನಡೆಸೋಕೆ ವಕೀಲರಿಗೆ ಹಣ ಕೊಡಬೇಕು. ಒಳ್ಳೆದು ಮಾಡ್ತೀನಿ ಅಂತ ಬಂದು ಈಗ ನಂಬಿಕೆಯೇ ಮುಳ್ಳಲಾಗಿದೆ’ ಎಂದಿದ್ದಾರೆ ಝೈದ್ ಖಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಮು, ಆನೇಕಲ್​
ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More
ಸ್ಟಿಂಗ್ ಚರ್ಚೆ ನಡುವೆ ಕುಮಾರಸ್ವಾಮಿ ಭೇಟಿಯಾದ ರಾಜೇಂದ್ರ ರಾಜಣ್ಣ
ಸ್ಟಿಂಗ್ ಚರ್ಚೆ ನಡುವೆ ಕುಮಾರಸ್ವಾಮಿ ಭೇಟಿಯಾದ ರಾಜೇಂದ್ರ ರಾಜಣ್ಣ
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಧನ್ವೀರ್ ವಿವಾದ: ದರ್ಶನ್ ನೋಡಲು ಝೈದ್ ಖಾನ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಆಪರೇಷನ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿದ್ದು
ಹೈಕಮಾಂಡ್ ಅಂಗಳಕ್ಕೆ ಸ್ಟಿಂಗ್ ಆಪರೇಷನ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿದ್ದು
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
Live: ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ ನೇರಪ್ರಸಾರ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಆಸ್ಪತ್ರೆಗೆ ದಾಖಲಾದ ಡಿಸಿಎಂ ಪರಮೇಶ್ವರ್; ಆರೋಗ್ಯ ವಿಚಾರಿಸಿದ ಸಿಎಂ ಡಿಕೆಶಿ
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಅರ್ನಾಬ್ ಅಬ್ಬರ: ಕಾಕಿನಾಡಕ್ಕೆ ರೆಡ್​​ ಅಲರ್ಟ್
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್