ದರ್ಶನ್​ಗೆ ಎದುರಾಗಬಹುದು ’ಸುಪ್ರೀಮ್’ ಸಂಕಷ್ಟ, ಜಾಮೀನು ನೀಡಿದ್ದನ್ನು ಪ್ರಶ್ನಿಸಲು ಪೊಲೀಸ್ ತಯಾರಿ

|

Updated on: Dec 17, 2024 | 2:45 PM

ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಧಾನ ಸಭಾ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಹಿಂದೆ ಎಫ್​ಐಅರ್ ದಾಖಲಾಗಿದೆ, ಇದುವರೆಗೆ ಯಾರಿಗೂ ನೋಟೀಸ್ ನೀಡಿಲ್ಲ, ಕೆಲ ಅಧಿಕಾರಿಗಳ ವಿರುದ್ಧ ಕೇಸನ್ನು ದಾಖಲಿಸಲಾಗಿದೆ, ವಿಧಾನ ಸಭಾ ಠಾಣೆಯ ಅಧಿಕಾರಿಗಳು ತನಿಖೆಯನ್ನು ನಡೆಸಲಿದ್ದಾರೆ ಎಂದು ಪೊಲೀಸ್ ಕಮೀಶನರ್ ದಯಾನಂದ ಹೇಳಿದರು.

ಬೆಂಗಳೂರು: ಸುಮಾರು ಎರಡು ತಿಂಗಳ ಅವಧಿಯಲ್ಲಿ ಎರಡೆರಡು ಜಾಮೀನುಗಳನ್ನು ಪಡೆದು ನಿರಾಳರಾಗಿರುವ ನಟ ದರ್ಶನ್​ಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ದರ್ಶನ್​ಗೆ ನೀಡಿರುವ ಜಾಮೀನನ್ನು ಪ್ರಶ್ನಿಸಿ ನಗರ ಪೊಲೀಸ್ ಸುಪ್ರೀಮ್ ಕೋರ್ಟ್ ಗೆ ಮನವಿ ಸಲ್ಲಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಗರದಲ್ಲಿಂದು ಮಾಧ್ಯಮಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಪೊಲೀಸ್ ಕಮೀಶನರ್ ಬಿ ದಯಾನಂದ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Darshan Arrest: ದರ್ಶನ್ ಬಂಧನ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳಿದ್ದೇನು? ವಿಡಿಯೋ ನೋಡಿ