ಔತಣಕ್ಕೆ ಕರೆಯುವ ವಿಜಯೇಂದ್ರ ನನ್ನನ್ನು ಉಚ್ಛಾಟಿಸುವಂತೆ ಒತ್ತಾಯಿಸಲು ಸಭೆಗಳನ್ನೂ ಮಾಡಿಸುತ್ತಾರೆ: ಯತ್ನಾಳ್

ಔತಣಕ್ಕೆ ಕರೆಯುವ ವಿಜಯೇಂದ್ರ ನನ್ನನ್ನು ಉಚ್ಛಾಟಿಸುವಂತೆ ಒತ್ತಾಯಿಸಲು ಸಭೆಗಳನ್ನೂ ಮಾಡಿಸುತ್ತಾರೆ: ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 17, 2024 | 1:55 PM

ಯಡಿಯೂರಪ್ಪ ಮತ್ತು ವಿಜಯೇಂದ್ರ ಎಲ್ಲ ಆಟಗಳನ್ನು ಆಡಿಸಿ ತಾವು ಪ್ರಾಮಾಣಿಕರು ಅಂತ ತೋರಿಸಿಕೊಳ್ಳುತ್ತಾರೆ, ಅವರೊಂದಿಗೆ 4 ದಶಕಗಳ ಕಾಲ ರಾಜಕಾರಣ ಮಾಡಿರುವ ತನಗೆ ಯಡಿಯೂರಪ್ಪನವರ ಎಲ್ಲ ವರಸೆಗಳು ಗೊತ್ತು, ಪಕ್ಷವನ್ನು ಅವರೊಬ್ಬರೇ ಕಟ್ಟಿಲ್ಲ, ಸೈಕಲ್ ಮೇಲೆ ಓಡಾಡಿರುವುದಾಗಿ ಹೇಳುತ್ತಾರೆ ಆದರೆ ಅವರ ವಾಹನಗಳಿಗೆ ತಾವೇ ಪೆಟ್ರೋಲ್ ಹಾಕಿಸಿದ್ದು ಎಂದು ಯತ್ನಾಳ್ ಹೇಳಿದರು.

ಬೆಳಗಾವಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಎಸ್ ಯಡಿಯೂರಪ್ಪ ಕುಟುಂಬದ ನಡುವಿನ ವೈಮನಸ್ಸು, ಜಗಳ ಯುಗಾಂತ್ಯಗೊಂಡರೂ ಕೊನೆಗೊಳ್ಳದು. ನಗರದಲ್ಲಿ ನಮ್ಮ ಪ್ರತಿನನಿಧಿಯೊಂದಿಗೆ ಮಾತಾಡಿದ ಯತ್ನಾಳ್ ಮತ್ತೊಮ್ಮೆ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರರನ್ನು ತರಾಟೆಗೆ ತೆಗೆದುಕೊಂಡರು. ವಿಜಯೇಂದ್ರ ಕರೆದಿರುವ ಡಿನ್ನರ್ ಸಭೆಗೆ ತಾನು ಮತ್ತು ರಮೇಶ್ ಜಾರಕಿಹೊಳಿ ಹೋಗುವುದಿಲ್ಲ ಎಂದ ಯತ್ನಾಳ್, ಒಂದೆಡೆ ಔತಣಕ್ಕೆ ಕರೆಯುತ್ತಾರೆ ಮತ್ತೊಂದು ಕಡೆ ತಮ್ಮ ಚೇಲಾಗಳಿಂದ ಸಭೆ ಮಾಡಿಸಿ ಯತ್ನಾಳ್​ರನ್ನು ಉಚ್ಛಾಟಿಸಬೇಕೆಂದು ಹೇಳಿಸುತ್ತಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಂಚಮಸಾಲಿ ಹೋರಾಟಕ್ಕೆ ಅನುಮತಿ ನೀಡದಿರಲು ಬೆಳಗಾವಿ ಡಿಸಿ ಸರ್ವಾಧಿಕಾರ ನಡೆಸುತ್ತಿದ್ದಾರೆಯೇ? ಬಸನಗೌಡ ಯತ್ನಾಳ್