ಪತಿಯನ್ನು ನೋಡಲು ಮೂರು ಬ್ಯಾಗ್ ಸಾಮಾನುಗಳೊಂದಿಗೆ ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ಅವರನ್ನು ಭೇಟಿಯಾಗಲು, ಅವರೊಂದಿಗೆ ಮಾತುಕತೆ ನಡೆಸಲು ದರ್ಶನ್ ರನ್ನು ಸಂದರ್ಶಕರ ಕೋಣೆಗೆ ತರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬೆಂಗಳೂರು ಜೈಲಲ್ಲಿ ಕೈಯಲ್ಲಿ ಸಿಗರೇಟು ಮತ್ತು ಕಾಫಿ ಮಗ್ ಹಿಡಿದು ನಗುತ್ತ ಕೂತಿದ್ದ ದರ್ಶನ್ ಮುಖ ಮೂರು ದಿನಗಳಲ್ಲಿ ನಿಸ್ತೇಜಗೊಂಡಿದೆ.
ಬಳ್ಳಾರಿ: ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಅವರ ಗೋಳು ಪಡುತ್ತಿರುವ ತಾಪತ್ರಯ ಸಾಮಾನ್ಯವಾದುದಲ್ಲ. ಪತಿ ಬೆಂಗಳೂರಿನ ಸೆಂಟ್ರಲ್ ಜೈಲಲ್ಲಿದ್ದಾಗ ಅಲ್ಲಿಗೆ ಹೋಗಿ ಬರುವುದು ಅವರಿಗೆ ಸಮಸ್ಯೆ ಇರಲಿಲ್ಲ. ಅದರೆ ಈಗ ಬಳ್ಳಾರಿವರೆಗೆ ಬರುವ ಅನಿವಾರ್ಯತೆ. ಅದರೆ ವಿಜಯಲಕ್ಷ್ಮಿ ಅಧೀರರಾಗಿಲ್ಲ. ಇವತ್ತು ದರ್ಶನ್ ಗೆ ಅಗತ್ಯವಿರುವ ಸಾಮಾನುಗಳ ಮೂರು ಬ್ಯಾಗ್ಗಳನ್ನು ಹೊತ್ತು ಅವರು ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ರನ್ನು ಐಸೋಲೇಟ್ ಮಾಡಿ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದೆ: ಟಿಪಿ ಶೇಷ, ಡಿಐಜಿ