ದರ್ಶನ್​ರನ್ನು ಐಸೋಲೇಟ್ ಮಾಡಿ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದೆ: ಟಿಪಿ ಶೇಷ, ಡಿಐಜಿ

ಬಳ್ಳಾರಿ ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಗಳನ್ನು ಅಳವಡಿಸಿರುವುದರಿಂದ ಸ್ಪೈನಲ್ ಕಾರ್ಡ್ ತೊಂದರೆಯಿಂದ ಬಳಲುತ್ತಿರುವ ದರ್ಶನ್, ಬಹಿರ್ದೆಶೆಗೆ ಬಹಳ ಕಷ್ಟವಾಗುತ್ತಿದೆ ಅಂತ ಹೇಳಿದ್ದಾರೆ, ಅವರ ಮೆಡಿಕಲ್ ರಿಪೋರ್ಟ್ ಒಮ್ಮೆ ಪರಿಶೀಲಿಸಿ ಅಗತ್ಯಬಿದ್ದರೆ ವೆಸ್ಟರ್ನ್ ಟಾಯ್ಲೆಟ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಟಿಪಿ ಶೇಷ ಹೇಳಿದರು.

ದರ್ಶನ್​ರನ್ನು ಐಸೋಲೇಟ್ ಮಾಡಿ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದೆ: ಟಿಪಿ ಶೇಷ, ಡಿಐಜಿ
|

Updated on: Aug 31, 2024 | 3:05 PM

ಬಳ್ಳಾರಿ: ನಗರದ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉತ್ತರ ವಲಯ ಡಿಐಜಿ ಟಿಪಿ ಶೇಷ, ನಟ ದರ್ಶನ್ ರನ್ನು ಐಸೋಲೇಟ್ ಮಾಡಿ ಒಂದು ಪ್ರತ್ಯೇಕ ಸೆಲ್​ನಲ್ಲಿರಿಸಲಾಗಿದೆ. ಅಲ್ಲಿರುವ 15 ಸೆಲ್ ಗಳಲ್ಲಿ ಕೇವಲ 4 ಕೈದಿಗಳು ಮಾತ್ರ ಇದ್ದಾರೆ, ಈ ಸೆಲ್ ಗಳ ಸುತ್ತ ಮೂರು ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು ಅವುಗಳ ಫುಟೇಜನ್ನು ಪ್ರತಿದಿನ ಮಾನಿಟರ್ ಮಾಡಲಾಗುತ್ತದೆ ಮತ್ತು ದರ್ಶನ್ ಇರುವ ಸೆಲ್ ಅನ್ನು ಇಬ್ಬರು ಪೊಲೀಸರು ಬಾಡಿವೋರ್ನ್ ಕೆಮೆರಾ ಧರಿಸಿ 24/7 ಕಾವಲು ಕಾಯುತ್ತಿರುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬಳ್ಳಾರಿ ಜೈಲಲ್ಲಿ ದರ್ಶನ್​ಗೆ ಮೂರನೇ ದಿನ, ಪರಿಶೀಲನೆಗೆ ಆಗಮಿಸಿದ ಉತ್ತರ ವಲಯ ಡಿಐಜಿ ಟಿಪಿ ಶೇಷ

Follow us