ಸಮಯ ಬಂದಾಗ ಪ್ರಾಸಿಕ್ಯೂಷನ್ ಮತ್ತು ರಾಜಭವನ ಚಲೋ ಬಗ್ಗೆ ಮಾತಾಡುವೆ: ಹೆಚ್ ಡಿ ದೇವೇಗೌಡ
ದೇವೇಗೌಡರು ದೇವಸ್ಥಾನದ ಪಕ್ಕದಲ್ಲೇ ಪತ್ರಿಕಾ ಗೋಷ್ಠಿ ನಡೆಸಿದ್ದರಿಂದ ಮತ್ತು ಪೂಜೆಗೆಂದು ಬಂದ ಭಕ್ತರ ಸಂಖ್ಯೆ ಹೆಚ್ಚಿದ್ದ ಕಾರಣ ಗದ್ದಲದಲ್ಲಿ ಗೌಡರು ಮಾತಾಡಿದ್ದು ಸರಿಯಾಗಿ ಕೇಳಿಸುವುದಿಲ್ಲ. ಮುಂಬರುವ ದಿನಗಳಲ್ಲಿ ಅವರು ರಾಜ್ಯದ ಉದ್ದಕ್ಕೂ ಪ್ರವಾಸ ಮಾಡುವುದಾಗಿ ಹೇಳಿದರು.
ಹಾಸನ: ಶ್ರಾವಣ ಮಾಸದ ಕೊನೇ ಶನಿವಾರ ಹಿನ್ನೆಲೆಯಲ್ಲಿ ಜಿಲ್ಲೆಯ ಮಾವಿನಕೆರೆಯಲ್ಲಿರುವ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿರುವ ಬಗ್ಗೆಕ ಪ್ರಶ್ನೆ ಕೇಳಿದಾಗ, ಇದುವರೆಗೆ ತಾನು ಅದರ ಬಗ್ಗೆ ಮಾತಾಡಿಲ್ಲ ಆದರೆ ಸಮಯ ಬಂದಾಗ ಮಾತಾಡುವುದಾಗಿ ಹೇಳಿದರು. ಕೆಲ ದಿನಗಳ ನಂತರ ಹಾಸನ ಜಿಲ್ಲೆಯಲ್ಲಿ ಓಡಾಡಿ ಪಕ್ಷವನ್ನು ಪುನಶ್ಚೇತನಗೊಳಿಸುವುದಾಗಿಯೂ ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ ಹೆಚ್ಡಿ ದೇವೇಗೌಡ ಪ್ರಯಾಣ: ಬಹುದಿನದ ಆಸೆ ನೆರವೇರಿತು ಎಂದ ಮಾಜಿ ಪ್ರಧಾನಿ
Latest Videos