Video: ದಸರಾ ಹಬ್ಬ: ಊರುಗಳತ್ತ ಮುಖಮಾಡಿದ ಜನ: ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಫುಲ್ ರಶ್

| Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2023 | 7:34 PM

ದಸರಾ ಹಬ್ಬದ ರಜೆ ಹಿನ್ನೆಲೆ ಜನರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ನಗರದ ವಿವಿಧೆಡೆಯಿಂದ ನೂರಾರು ಜನರು ಆಗಮಿಸಿದ್ದು, ಬೆಂಗಳೂರಿನ ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಫುಲ್ ರಶ್​ ಆಗಿದೆ. ಬೆಂಗಳೂರಿನಿಂದ ಇತರೆ ಜಿಲ್ಲೆಗಳಿಗೆ ತೆರಳುವ ಬಸ್​ಗಳು ಕೂಡ ಪ್ರಯಾಣಿಕರಿಂದ ತುಂಬಿ ತುಳುಕಿವೆ.

ಬೆಂಗಳೂರು, ಅಕ್ಟೋಬರ್​​​ 22: ದಸರಾ ಹಬ್ಬದ (Dasara) ರಜೆ ಹಿನ್ನೆಲೆ ಜನರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ನಗರದ ವಿವಿಧೆಡೆಯಿಂದ ನೂರಾರು ಜನರು ಆಗಮಿಸಿದ್ದು, ಬೆಂಗಳೂರಿನ ಮೆಜೆಸ್ಟಿಕ್​ನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಫುಲ್ ರಶ್​ ಆಗಿದೆ. ಬೆಂಗಳೂರಿನಿಂದ ಇತರೆ ಜಿಲ್ಲೆಗಳಿಗೆ ತೆರಳುವ ಬಸ್​ಗಳು ಕೂಡ ಪ್ರಯಾಣಿಕರಿಂದ ತುಂಬಿ ತುಳುಕಿವೆ. ಒಂದು ಕಡೆ ಬಸ್​ಗಳು ರಶ್ ಆಗಿದ್ದು, ಇನ್ನೊಂದು ಕಡೆ ಸರಿಯಾದ ಸಮಯಕ್ಕೆ ಬಸ್​ ಸಿಗದೆ ಮಹಿಳೆಯರು ಮತ್ತು ಮಕ್ಕಳು ಪರದಾಡಿದ್ದಾರೆ. ಕೆ‌ಎಸ್‌ಆರ್‌ಟಿಸಿ ಸಂಚಾರಿ ನೀರಿಕ್ಷಕರೊಂದಿಗೆ ಪ್ರಯಾಣಿಕರ ಮಾತಿನ ಚಕಮಕಿ ಕೂಡ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.