ವಿಜಯನಗರ ಅಂಡರ್​ಪಾಸ್​ನಲ್ಲಿ ಬಿಎಂಟಿಸಿಯ ಈವಿ ಬಸ್ ಅಪಘಾತ ನಡೆಸಿದ ದೃಶ್ಯ ಕಾರಿನ ಡ್ಯಾಶ್​ಕಾಮ್​ನಲ್ಲಿ ಸೆರೆ

Updated on: Aug 28, 2025 | 1:01 PM

ಲಭ್ಯವಿರುವ ಮಾಹಿತಿಯ ಪ್ರಕಾರ ಕಳೆದ ಕಳೆದೊಂದು ವರ್ಷದ ಅವಧಿಯಲ್ಲಿ ಬಿಎಂಟಿಸಿಯ ಈವಿ ಬಸ್ಸುಗಳು ಶಾಮೀಲುಗೊಂಡಿರುವ ಅಪಘಾತಗಳಲ್ಲಿ 18 ಜನ ಮರಣವನ್ನಪ್ಪಿದ್ದಾರೆ. ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ಬಿಎಂಟಿಸಿ ನೇಮಕ ಮಾಡಿಕೊಳ್ಳುತ್ತಿರುವುದು ಪದೇಪದೆ ನಡೆಯುತ್ತಿರುವ ಅಪಘಾತಗಳಿಗೆ ಒಂದು ಕಾರಣ ಎನ್ನಲಾಗಿದೆ. ಸಂಸ್ತೆಯು ತನ್ನ ಚಾಲಕ ಮತ್ತು ನಿರ್ವಾಹಕರ ಮೇಲೆ ನಿಗಾ ಹೆಚ್ಚಿಸಿದರೆ ಮತ್ತು ಹೊಣೆಗಾರಿಕೆಯನ್ನು ಅವರ ಮೇಲೆ ಹೇರಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಬೆಂಗಳೂರು, ಆಗಸ್ಟ್ 28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರಿದ ಬಿಎಂಟಿಸಿ ವಿಭಾಗವು ಎಲೆಕ್ಟ್ರಿಕ್ ಬಸ್​ಗಳನ್ನು ಖರೀದಿಸಿ ಅವುಗಳನ್ನು ಆಪರೇಟ್ ಮಾಡಲು ಶುರುವಾಡಿದ ಬಳಿಕ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ. ಮೊದಲು, ಇತ್ತೀಚಿಗೆ ವಿಜಯನಗರ ಅಂಡರ್ ಪಾಸ್​ನಲ್ಲಿ ಈವಿ ಬಸ್ಸೊಂದು ಕಾರಣವಿಲ್ಲದೆ ಅಪಘಾತ ನಡೆಸಿದ ದೃಶ್ಯವನ್ನು ನೋಡೋಣ. ಕಾರೊಂದರ ಡ್ಯಾಶ್​ಕ್ಯಾಮ್ ನಲ್ಲಿ ಇದು ಸೆರೆಯಾಗಿದೆ. ಬಸ್ಸು ಒಂದು ಸಣ್ಣ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಢಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಜಿಗಿದಿದೆ. ಅದೃಷ್ಟವಶಾತ್ ಯಾರಿಗೇನೂ ಆಗಿಲ್ಲ, ಬಸ್​ನಲ್ಲಿದ್ದವರು ಸಹ ಅಪಾಯದಿಂದ ಪಾರಾಗಿದ್ದಾರೆ. ಆದರೆ ಈವಿ ಬಸ್ಸಿನಿಂದ ವಿನಾಕಾರಣ ಇಂಥ ದುರ್ಘಟನೆ ಹೇಗೆ ನಡೆಯಿತು ಅನ್ನೋದು ಯಕ್ಷಪ್ರಶ್ನೆಯಾಗಿದೆ.

ಇದನ್ನೂ ಓದಿ:   ಅಪಘಾತಕ್ಕೆ ಬ್ರೇಕ್​ ಹಾಕಲು ಬಿಎಂಟಿಸಿಯ ಬಸ್​ ಚಾಲಕರಿಗೆ ವಿಶೇಷ ತರಬೇತಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ