ಹುಬ್ಬಳ್ಳಿ: ನಿರಂತರ ಮಳೆಗೆ ಕುಸಿದುಬಿದ್ದ ಮನೆ ಗೋಡೆ, 7 ಜನ ಜಸ್ಟ್ ಮಿಸ್
ಉತ್ತರ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು, ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದಲ್ಲಿಯೂ ಮಳೆ ಸುರಿಯುತ್ತಿದೆ. ಹುಬ್ಬಳ್ಳಿಯಲ್ಲಿ ನಿರಂತರ ಮನೆಯಿಂದ ನಗರದ ಅಬ್ಬಾಸಲಿ ಚೌಕ್ ಬಳಿ ಮನೆಯೊಂದರ ಗೋಡೆ ಕುಸಿದುಬಿದ್ದು ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಬಚಾವಾಗಿದ್ದಾರೆ. ಘಟನೆಯ ವಿಡಿಯೋ ಇಲ್ಲಿದೆ.
ಹುಬ್ಬಳ್ಳಿ, ಆಗಸ್ಟ್ 28: ನಿರಂತರ ಮಳೆಗೆ ಹುಬ್ಬಳ್ಳಿಯ ಗಾರ್ಡನ್ ಪೇಟೆ ಅಬ್ಬಾಸಲಿ ಚೌಕ್ ಬಳಿ ಮುಮ್ತಾಜ್ ವಡ್ಡು ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದುಬಿದ್ದು ಅವಾಂತರವಾಗಿದೆ. ಅದೃಷ್ಟವಶಾತ್, ಮನೆಯಲ್ಲಿದ್ದ 7 ಮಂದಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಮನೆಯ ಗೋಡೆ ಕುಸಿಯುತ್ತಿದ್ದಂತೆ ಮನೆಯಿಂದ ಹೊರಬಂದ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ.
