Loading video

ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೇಟ್ ಆಪರೇಟರ್​​ಗಳಿಗೆ ಸಂಬಳವಿಲ್ಲ, ಮುಷ್ಕರ; ರೋಗಿಗಳ ಪರದಾಟ

Updated on: Jun 02, 2025 | 1:47 PM

ಟಿವಿ9 ವರದಿಗಾರ ಮುಷ್ಕರ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಜೊತೆಯೂ ಮಾತಾಡಿದ್ದಾರೆ. ಅವರು ಹೇಳುವ ಪ್ರಕಾರ ಅಧಿಕಾರಿಯೊಬ್ಬರು ಇವರನ್ನು ಕಂಡು ಮಾತಾಡಿ ಒಂದು ತಿಂಗಳ ಸಂಬಳ ಅವರ ಅಕೌಂಟ್​​ಗಳಿಗೆ ಹಾಕಿಸುವುದಾಗಿ ಹೇಳಿದ್ದಾರಂತೆ. ಅದರೆ ಅವರ ಮಾತಿನ ಮೇಲೆ ಸಿಬ್ಬಂದಿಗೆ ಭರವಸೆ ಇಲ್ಲ. ಯಾಕೆಂದರೆ ಇದಕ್ಕೆ ಮುಂಚೆ ನೀಡಿದ ಚೆಕ್ ಮಾನ್ಯವಾಗಿಲ್ಲವಂತೆ. ಸಚಿವರೇ ಮತ್ತು ಅಧಿಕಾರಿಗಳೇ ಗಮನಿಸಿ.

ಬೆಂಗಳೂರು, ಜೂನ್ 2: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (health minister Dinesh Gundu Rao) ಇದನ್ನೆಲ್ಲ ಗಮನಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಮಾರಾಯ್ರೇ. ಇದು ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದು ಬೆಳಗ್ಗೆ 8 ಗಂಟೆಯಿಂದ ಕಂಡು ಬಂದ ದೃಶ್ಯ. ಆಸ್ಪತ್ರೆಯ ಡೇಟಾ ಆಪರೇಟರ್ ಸಿಬ್ಬಂದಿಗೆ ಕಳೆದ 4 ತಿಂಗಳಿಂದ ಸಂಬಳ ಸಿಗದ ಕಾರಣ ಇವತ್ತಿನಿಂದ ಮುಷರಕ್ಕೆ ಕೂತಿದ್ದು ಹೊರರೋಗಿಗಳಿಗೆ ಟೋಕನ್ ವಿತರಿಸುವ ವಿಭಾಗದಲ್ಲಿ ಯಾರೂ ಇಲ್ಲ. ರೋಗಿ ಮತ್ತು ಅವರೊಂದಿಗೆ ಬಂದ ಸಹಾಯಕರು ಗಲಾಟೆ ಮಾಡಿದ ಬಳಿಕ, ವಿಭಾಗದಲ್ಲಿ ಹೊಸಬರನ್ನು ತಂದು ಕೂರಿಸಲಾಗಿದೆ. ಆದರೆ ಅವರಿಂದ ಬೇಗ ಬೇಗ ಚೀಟಿಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಗಂಟೆಗಳಿಂದ ಸರತಿ ಸಾಲಲ್ಲಿ ನಿಂತವರು ಆಸ್ಪತ್ರೆ ಸಿಬ್ಬಂದಿ ಮೇಲೆ ಕೋಪ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ:  ಮಂಡ್ಯ: ಮಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ