ವಾಹನಗಳಿಗೆ ಗ್ಯಾಸ್ ತುಂಬಿಸುವಾಗ ಅವಘಡ; ಬಾಂಬ್ ರೀತಿ ಸಿಡಿದ ಓಮಿನಿ ಕಾರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 16, 2024 | 10:10 PM

ಅನಧಿಕೃತವಾಗಿ ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಅವಘಡ ನಡೆದಿದ್ದು, ಬಾಂಬ್ ರೀತಿ ಎರಡು ಬಾರಿ ಬ್ಲಾಸ್ಟ್ ಆದ ಘಟನೆ ದಾವಣಗೆರೆ(Davanagere) ತಾಲೂಕಿನ ದೊಡ್ಡಬೂದಿಹಾಳ್‌ ಗ್ರಾಮದಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಹಲವು ದಿನಗಳಿಂದ ಓಮಿನಿ ಹಾಗೂ ಆಟೋಗಳಿಗೆ ಅನಧಿಕೃತವಾಗಿ ಎಲ್​ಪಿಜಿ ಗ್ಯಾಸ್ ತುಂಬಲಾಗುತ್ತಿತ್ತು. ಇಂದು ಇದ್ದಕ್ಕಿದ್ದಂತೆ ಸಿಲಿಂಡರ್​ನಲ್ಲಿ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದೆ.

ದಾವಣಗೆರೆ, ಏ.16: ಅನಧಿಕೃತವಾಗಿ ವಾಹನಗಳಿಗೆ ಗ್ಯಾಸ್ ಸಿಲಿಂಡರ್ ತುಂಬಿಸುವಾಗ ಅವಘಡ ನಡೆದಿದ್ದು, ಬಾಂಬ್ ರೀತಿ ಎರಡು ಬಾರಿ ಬ್ಲಾಸ್ಟ್ ಆದ ಘಟನೆ ದಾವಣಗೆರೆ(Davanagere) ತಾಲೂಕಿನ ದೊಡ್ಡಬೂದಿಹಾಳ್‌ ಗ್ರಾಮದಲ್ಲಿ ನಡೆದಿದೆ. ಜನನಿಬಿಡ ಪ್ರದೇಶದಲ್ಲಿ ಹಲವು ದಿನಗಳಿಂದ ಓಮಿನಿ ಹಾಗೂ ಆಟೋಗಳಿಗೆ ಅನಧಿಕೃತವಾಗಿ ಎಲ್​ಪಿಜಿ ಗ್ಯಾಸ್ ತುಂಬಲಾಗುತ್ತಿತ್ತು. ಇಂದು ಇದ್ದಕ್ಕಿದ್ದಂತೆ ಸಿಲಿಂಡರ್​ನಲ್ಲಿ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಇನ್ನು ಬೆಂಕಿ ಹೆಚ್ಚಾಗುತ್ತಿದ್ದಂತೆ ಬಾಂಬ್ ರೀತಿ ಓಮಿನಿ ಕಾರು ಸಿಡಿದಿದೆ. ಬಾಂಬ್ ರೀತಿ ಸಿಡಿದ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಇನ್ನು ಈ ಘಟನೆ ಗಾಂಧಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ