ಉಸಿರಾಡಲು ಶುದ್ಧ ಮತ್ತು ನಿರ್ಮಲ ಹವೆಯಿರುವ ಭಾರತದ ಮೊದಲ ಐದು ನಗರಗಳಲ್ಲಿ ದಾವಣಗೆರೆಯೂ ಸೇರಿದೆ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Dec 16, 2021 | 8:15 PM

ನಮ್ಮ ನಾಡಿನ ಸ್ಮಾರ್ಟ್ ಸಿಟಿ ದಾವಣಗೆರೆ ಈ ಲಿಸ್ಟ್​ನಲ್ಲಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ. ಅದೊಂದು ಸುಂದರ ನಗರ ಅಂತ ನಮ್ಮೆಲ್ಲರಿಗೂ ಗೊತ್ತಿತ್ತು ಅದರೆ ಇಲ್ಲಿನ ಹವೆಯೂ ನಿರ್ಮಲವಾಗಿದೆ ಅಂತ ಗೊತ್ತಿರಲಿಲ್ಲ.

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಗಾಳಿ, ಪರಿಸರ ಎಷ್ಟು ಕೆಟ್ಟುಹೋಗಿದೆ ಎಂದು ಬೇರೆ ಗ್ರಹದ ಜೀವಿಗಳಿಗೂ ಗೊತ್ತಾಗಿದೆ. ಪರಿಸರ ತಜ್ಞರು, ವಿಜ್ಞಾನಿಗಳು ಜನ ಉಸಿರಾಡುವ ಗಾಳಿಯನ್ನು ಶುದ್ಧಮಾಡುವ ಪ್ರಯತ್ನದಲ್ಲಿ ಸಫಲರಾಗುತ್ತಿಲ್ಲ. ಹಾಗಂತ ನಮ್ಮ ಬೆಂಗಳೂರಿನ ಸ್ಥಿತಿ ಉತ್ತೇಜದಾಯಕವಾಗಿದೆ ಅಂತ ಭಾವಿಸಬೇಡಿ. ಇಲ್ಲೂ ಹವಾಮಾನ ಕೆಟ್ಟಿದೆ ಅದರೆ, ದೆಹಲಿಯಷ್ಟು ಅಲ್ಲ ಅನ್ನೋದೊಂದೇ ಸಮಾಧಾನದ ಸಂಗತಿ. ಹಾಗಾದರೆ, ಉಸಿರಾಡಲು ಪರಿಶುದ್ಧ, ನಿಷ್ಕಲ್ಮಶ ಗಾಳಿ ಎಲ್ಲಿ ಸಿಕ್ಕೀತು ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದ ಐದು ನಗರ ಪ್ರದೇಶಗಳಲ್ಲಿ ಉಸಿರಾಡಲು ಮಾಲಿನ್ಯಮುಕ್ತ ಹವೆ ಸಿಗುತ್ತದೆ. ಗಮನಿಸಬೇಕಾದ ಸಂಗತಿಯೇನೆಂದರೆ, ಈ ಐದು ನಗರಗಳಲ್ಲಿ 4 ದಕ್ಷಿಣ ಭಾರತದಲ್ಲಿವೆ ಮತ್ತು ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಸಿಕೊಳ್ಳುವ ದಾವಣಗೆರೆಯೂ ಅದರಲ್ಲಿ ಸೇರಿದೆ.

ಲಿಸ್ಟ್​​​​ನಲ್ಲಿರುವ ಮೊದಲ ಪ್ರದೇಶವೆಂದರೆ ಮಿಜೊರಾಂನ ರಾಜಧಾನಿ ಐಜ್ವಾಲ್. ಇಲ್ಲಿ ಬೀಸುವ ಗಾಳಿ ಪರಿಶುದ್ಧವಾದದ್ದು ಎನ್ನಲಾಗಿದೆ. ಈ ಪ್ರದೇಶವು ಕಣಿವೆ, ಬೆಟ್ಟಗುಡ್ಡ ಮತ್ತು ಜಲಪಾತಗಳಿಂದ ಕೂಡಿದೆ. ಐಜ್ವಾಲ್ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದೆ. ಯಾಕೆಂದರೆ, ಇಲ್ಲಿ ಯಾವುದೂ ದುಬಾರಿಯಲ್ಲ. ಎರಡನೇ ಸ್ಥಾನದಲ್ಲಿರುವ ಸ್ಥಳವೆಂದರೆ ತಮಿಳುನಾಡಿನ ಮತ್ತು ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಸಿಕೊಳ್ಳುವ ಕೊಯಮತ್ತೂರ್.

ಇದು ಹೇರಳವಾಗಿ ಕೈಗಾರಿಕೆಗಳು ಇರುವ ಪ್ರದೇಶವಾದರೂ ಅಲ್ಲಿ ಗಾಳಿ ಶುದ್ಧವಾಗಿದೆ. ಪ್ರಾಯಶಃ ಪಶ್ಚಿಮ ಘಟ್ಟಗಳ ಸಾಲಿಗೆ ನಗರ ಹತ್ತಿರವಾಗಿರುವುದರಿಂದ ಇಲ್ಲಿನ ಪರಿಸರ ಅತ್ಯುತ್ತಮವಾಗಿರಲು ನೆರವಾಗಿರಬಹುದು.

ಮೂರನೇ ಸ್ಥಾನದಲ್ಲಿ ಆಂದ್ರಪ್ರದೇಶದ ರಾಜಧಾನಿ ಅಮರಾವತಿ ಮತ್ತು ಅದೇ ರಾಜ್ಯದ ಕರಾವಳಿ ನಗರ ವಿಶಾಖಪಟ್ನಂ ಇವೆ. ಅಮರಾವತಿ ಆಂಧ್ರಪ್ರದೇಶ ಇಬ್ಭಾಗಗೊಂಡ ನಂತರ ಸೃಷ್ಟಿಯಾಗಿರುವ ನಗರ. ಈ ನಗರ ನಿರ್ಮಾಣ ಕಾರ್ಯವನ್ನು ಹಿಂದಿನ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರಂಭಿಸಿದರು. ಅದನ್ನು ಮುಂದುವರಿಸಿಕೊಂಡು ಹೋಗುತ್ತಿರೋದು ಈಗಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ.

ನಮ್ಮ ನಾಡಿನ ಸ್ಮಾರ್ಟ್ ಸಿಟಿ ದಾವಣಗೆರೆ ಈ ಲಿಸ್ಟ್​ನಲ್ಲಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ. ಅದೊಂದು ಸುಂದರ ನಗರ ಅಂತ ನಮ್ಮೆಲ್ಲರಿಗೂ ಗೊತ್ತಿತ್ತು ಅದರೆ ಇಲ್ಲಿನ ಹವೆಯೂ ನಿರ್ಮಲವಾಗಿದೆ ಅಂತ ಗೊತ್ತಿರಲಿಲ್ಲ.

ಇದನ್ನೂ ಓದಿ: ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್

Published on: Dec 16, 2021 08:15 PM
Loading...
Unable to load recommendations.
Follow Us
TV9 Web

TV9 Kannada

Read More