ಶಾಸಕರ ಸಖತ್ ಸ್ಟೆಪ್: ತಮಟೆ ಸದ್ದಿಗೆ ಮೈ ಚಳಿ ಬಿಟ್ಟು ಕುಣಿದ ಶಾಸಕ ಎಂ.ಪಿ ರೇಣುಕಾಚಾರ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 24, 2022 | 7:31 AM

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಮ್ಮೊರಗಟ್ಟ ಗ್ರಾಮದಲ್ಲಿ ತಲೆಗೆ ಕೇಸರಿ ಬಟ್ಟೆ, ಹೆಗಲಿಗೆ ಹಸಿರು ಶಾಲು ತೊಟ್ಟು ತಮಟೆ ಸದ್ದಿಗೆ ಶಾಸಕರು ಸಖತ್ ಸ್ಟೆಪ್​ ಹಾಕಿದ್ದಾರೆ.

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಶಾಸಕ ರೇಣುಕಾಚಾರ್ಯ (MP Renukacharya) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿತ್ತಾರೆ. ಹೌದು ಈಗ ಮತ್ತೊಮ್ಮೆ ಅಂತಹದೇ ಸುದ್ದಿಯಲ್ಲಿದ್ದಾರೆ ರೇಣುಕಾಚಾರ್ಯ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ ಚಾಲನೆ ವೇಳೆ ತಮಟೆ ಸದ್ದಿಗೆ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಮ್ಮೊರಗಟ್ಟ ಗ್ರಾಮದಲ್ಲಿ ತಲೆಗೆ ಕೇಸರಿ ಬಟ್ಟೆ, ಹೆಗಲಿಗೆ ಹಸಿರು ಶಾಲು ತೊಟ್ಟು ತಮಟೆ ಸದ್ದಿಗೆ ಶಾಸಕರು ಸಖತ್ ಸ್ಟೆಪ್​ ಹಾಕಿದ್ದಾರೆ. ಸದ್ಯ ಶಾಸಕ ರೇಣುಕಾಚಾರ್ಯ ಅವರ ಡ್ಯಾನ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಉದ್ಯಮಿ ಮುಖೇಶ್ ಅಂಬಾನಿಗಿಂತಲೂ (Mukesh Ambani) ನಾನು ಅದೃಷ್ಠವಂತ. ಅಂಬಾನಿ ಎಷ್ಟೋ ಕೋಟಿ ರೂಪಾಯಿ ಆಸ್ತಿಯ ಒಡೆಯ. ಆದರೆ ಅವರಿಗೆ ನನ್ನ ಹಾಗೇ ಶಾಸಕ ಆಗಲು ಸಾಧ್ಯವಾಗಿದ್ಯಾ ಎಂದು ಹೊನ್ನಾಳಿಯಲ್ಲಿ ಶಾಸಕ ಎಂ‌.ಪಿ‌.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:  ಶಾಸಕ ರೇಣುಕಾಚಾರ್ಯ ಮೇಲಿದ್ದ ಕೇಸ್​ಗಳು ಖುಲಾಸೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಶಾಸಕ

ನಾನು ಎಂದೂ ಅಧಿಕಾರಕ್ಕಾಗಿ ಹಪಹಪಿಸುವ ವ್ಯಕ್ತಿಯಲ್ಲ. ಹಾಗಂತ ನಾನು ಸನ್ಯಾಸಿ ಸಹ ಅಲ್ಲ. ನನ್ನ ಕ್ಷೇತ್ರ ಹೊನ್ನಾಳಿ. ಕ್ಷೇತ್ರದ ಜನ ಅಧಿಕಾರ ಕೊಟ್ಟಿದ್ದಾರೆ. ಅವರಿಗಾಗಿ ನಾನು ದುಡಿಯುವೆ. ಅಧಿಕಾರ ಸಿಗಬಹುದು ಎಂಬ ಆಶಾಭಾವ ಇರುವ ವ್ಯಕ್ತಿ ಎಂದರು.