ಉದ್ಯಮಿ ಮುಖೇಶ್ ಅಂಬಾನಿಗಿಂತಲೂ ನಾನು ಅದೃಷ್ಠವಂತ, ಅವರಿಗೆ ನನ್ನ ಹಾಗೇ ಶಾಸಕ ಆಗಲು ಸಾಧ್ಯವಾಗಿದ್ಯಾ? -ಎಂ.ಪಿ.ರೇಣುಕಾಚಾರ್ಯ
ನಾನು ಎಂದೂ ಅಧಿಕಾರಕ್ಕಾಗಿ ಹಪಹಪಿಸುವ ವ್ಯಕ್ತಿಯಲ್ಲ. ಹಾಗಂತ ನಾನು ಸನ್ಯಾಸಿ ಸಹ ಅಲ್ಲ. ನನ್ನ ಕ್ಷೇತ್ರ ಹೊನ್ನಾಳಿ. ಕ್ಷೇತ್ರದ ಜನ ಅಧಿಕಾರ ಕೊಟ್ಟಿದ್ದಾರೆ. ಅವರಿಗಾಗಿ ನಾನು ದುಡಿಯುವೆ. ಅಧಿಕಾರ ಸಿಗಬಹುದು ಎಂಬ ಆಶಾಭಾವ ಇರುವ ವ್ಯಕ್ತಿ.
ದಾವಣಗೆರೆ: ಉದ್ಯಮಿ ಮುಖೇಶ್ ಅಂಬಾನಿಗಿಂತಲೂ(Mukesh Ambani) ನಾನು ಅದೃಷ್ಠವಂತ. ಅಂಬಾನಿ ಎಷ್ಟೋ ಕೋಟಿ ರೂಪಾಯಿ ಆಸ್ತಿಯ ಒಡೆಯ. ಆದರೆ ಅವರಿಗೆ ನನ್ನ ಹಾಗೇ ಶಾಸಕ ಆಗಲು ಸಾಧ್ಯವಾಗಿದ್ಯಾ ಎಂದು ಹೊನ್ನಾಳಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಹೇಳಿಕೆ ನೀಡಿದ್ದಾರೆ.
ನಾನು ಎಂದೂ ಅಧಿಕಾರಕ್ಕಾಗಿ ಹಪಹಪಿಸುವ ವ್ಯಕ್ತಿಯಲ್ಲ. ಹಾಗಂತ ನಾನು ಸನ್ಯಾಸಿ ಸಹ ಅಲ್ಲ. ನನ್ನ ಕ್ಷೇತ್ರ ಹೊನ್ನಾಳಿ. ಕ್ಷೇತ್ರದ ಜನ ಅಧಿಕಾರ ಕೊಟ್ಟಿದ್ದಾರೆ. ಅವರಿಗಾಗಿ ನಾನು ದುಡಿಯುವೆ. ಅಧಿಕಾರ ಸಿಗಬಹುದು ಎಂಬ ಆಶಾಭಾವ ಇರುವ ವ್ಯಕ್ತಿ ಎಂದರು.
ಇನ್ನು ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ, ಕಾಂಗ್ರೆಸ್ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಭ್ರಮೆಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ 50ರಿಂದ 60 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ. ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ. ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಪಿಎಸ್ಐ ನೇಮಕಾತಿ ಹಗರಣದ ತನಿಖೆ ಆಗಲಿ. ಕಾಂಗ್ರೆಸ್ ನವರು ಈ ಬಗ್ಗೆ ಕೇವಲ ಆರೋಪ ಮಾಡುತ್ತಿದ್ದಾರೆ. ಸಿಎಂ ಹಾಗೂ ಗೃಹ ಸಚಿವರ ಬಗ್ಗೆ ಆರೋಪ ಮಾಡುವ ಕಾಂಗ್ರೆಸ್ ನವರು ದಾಖಲೆ ಬಿಡುಗಡೆ ಮಾಡಲಿ ಎಂದು ರೇಣುಕಾಚಾರ್ಯ, ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದ್ದಾರೆ.
ನದಿ ಪಾತ್ರದ ಪ್ರದೇಶಗಳಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ಇನ್ನು ಮಲೆನಾಡಿನಲ್ಲಿ ಮಳೆ ಹೆಚ್ಚಾಗಿದೆ, ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೊನ್ನಾಳಿ ಹರಿಹರ ತಾಲೂಕಿನ ನದಿ ಪಾತ್ರದ ಪ್ರದೇಶದ ಜನರು ಪ್ರವಾಹದ ಭೀತಿಯಲ್ಲಿ ಇದ್ದಾರೆ. ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಸೇರಿದಂತೆ ಬಹುತೇಕ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ನದಿ ಪಾತ್ರದ ಪ್ರದೇಶಗಳಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿದ್ದಾರೆ. ನದಿ ಪಾತ್ರದ ಪ್ರದೇಶದ ಜರ ಸ್ಥಳಾಂತರಕ್ಕೆ ಪ್ರಯತ್ನ ನಡೆದಿದೆ. ಆದ್ರೆ ಈ ಪ್ರದೇಶ ಬಿಟ್ಟು ಜನ ಹೋಗುತ್ತಿಲ್ಲ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
Published On - 6:42 pm, Wed, 13 July 22