ಶಾಸಕ ರೇಣುಕಾಚಾರ್ಯ ಮೇಲಿದ್ದ ಕೇಸ್​ಗಳು ಖುಲಾಸೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಶಾಸಕ

ಕೋರ್ಟ್​ನಲ್ಲಿ ಕೆಲ ಅಧಿಕಾರಿಗಳೇ ಉಲ್ಟಾ ಹೇಳಿಕೆ ನೀಡಿದ್ದು, ಇನ್ನೂ ಕೆಲ ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರೆತೆ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದ ನ್ಯಾಯ ಮೂರ್ತಿ ಜೆ.ಪ್ರೀತ್ ಪ್ರಕರಣಗಳನ್ನ ಖುಲಾಸೆ ಗೊಳಿಸಿ ಆದೇಶ ಹೊರಡಿಸಿದರು.

ಶಾಸಕ ರೇಣುಕಾಚಾರ್ಯ ಮೇಲಿದ್ದ ಕೇಸ್​ಗಳು ಖುಲಾಸೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಶಾಸಕ
ಎಂ.ಪಿ‌ ರೇಣುಕಾಚಾರ್ಯ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 01, 2022 | 1:14 PM

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌ ರೇಣುಕಾಚಾರ್ಯ ಮೇಲಿದ್ದ ಒಟ್ಟು ನಾಲ್ಕು ಕೇಸ್​ಗಳು ಖುಲಾಸೆ  ಮಾಡಿ, ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ ತೀರ್ಪು ನೀಡಿದೆ. ಸದ್ಯ ಶಾಸಕ ರೇಣುಕಾಚಾರ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 2018 ದಾಖಲಾದ ನಾಲ್ಕು ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಕೇಸ್​ ಖುಲಾಸೆಯಾಗಿದೆ.

ಇದನ್ನೂ ಓದಿ: Sai Pallavi: ಸಿಂಪಲ್​ ಸೀರೆ ಧರಿಸಿ ಕಣ್ಮನ ಸೆಳೆದ ಸಾಯಿ ಪಲ್ಲವಿ; ಸ್ಟಾರ್​ ನಟಿಗೆ ಅಭಿಮಾನಿಗಳ ಲೈಕ್ಸ್​ ಸುರಿಮಳೆ

ಕೋರ್ಟ್​ನಲ್ಲಿ ಕೆಲ ಅಧಿಕಾರಿಗಳೇ ಉಲ್ಟಾ ಹೇಳಿಕೆ ನೀಡಿದ್ದು, ಇನ್ನೂ ಕೆಲ ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರೆತೆ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದ ನ್ಯಾಯ ಮೂರ್ತಿ ಜೆ.ಪ್ರೀತ್ ಪ್ರಕರಣಗಳನ್ನ ಖುಲಾಸೆ ಗೊಳಿಸಿ ಆದೇಶ ಹೊರಡಿಸಿದರು. 2018 ಡಿಸೆಂಬರ್ 10ರಂದು ಅಕ್ರಮ ಮರಳು ಸಾಗಾಣಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿದ್ದು, ಪೊಲೀಸರ ಕಾರ್ಯಕ್ಕೆ ಅಡ್ಡಿ ಪಡಿಸಿದ ಆರೋಪವನ್ನ ರೇಣುಕಾಚಾರ್ಯ ಎದುರಿಸುತ್ತಿದ್ದರು.

ಮೇ 13, 2018 ವಿಧಾನಸಭೆ ಚುನಾವಣೆ ವೇಳೆ ಮುಷ್ಠಿ ಅಕ್ಕಿ ಅಭಿಯಾನದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿತ್ತು. ಅಕ್ರಮವಾಗಿ ಮರಳು ತುಂಬಿಕೊಂಡು ಹೋಗುವಂತೆ ಜನರಿಗೆ ಕರೆ ನೀಡಿದ್ದ ಆರೋಪವನ್ನು  ರೇಣುಕಾಚಾರ್ಯ ಎದುರಿಸುತ್ತಿದ್ದರು. ಒಟ್ಟು ನಾಲ್ಕು ಪ್ರಕರಣಗಳಲ್ಲಿ ರೇಣುಕಾಚಾರ್ಯ ಖುಲಾಸೆಯಾಗಿದೆ.

ಇದನ್ನೂ ಓದಿ: ಕರ್ನಾಟಕದ ವಿವಿಧೆಡೆ ಪೌರಕಾರ್ಮಿಕರ ಪ್ರತಿಭಟನೆ: ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada