ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ

Edited By:

Updated on: Apr 01, 2026 | 10:24 PM

ಕರ್ನಾಟಕದಲ್ಲಿ ಎರಡು ವಿಧಾನಭಾ ಕ್ಷೇತ್ರಗಳ ಉಪಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗೆ ಬಿರು ಬೇಸಿಗೆಯಲ್ಲೂ ಗಲ್ಲಿ ಗಲ್ಲಿ ಸುತ್ತುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಬಾಗಲಕೋಟೆಯಲ್ಲಿ ಮೂರು ದಿನ ತಮ್ಮ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಭರ್ಜರಿ ಪ್ರಚಾರ ಮಾಡಿ ಇದೀಗ ದಾವಣೆಗೆರೆ ಅಖಾಡಕ್ಕಿಳಿದಿದ್ದಾರೆ. ಹೌದು...ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಲಕೋಟೆ ಮುಗಿಸಿಕೊಂಡು ಇಂದು (ಏ 01) ದಾವಣಗೆರೆಗೆ ಕಾಲಿಟ್ಟಿದ್ದು, ತಮ್ಮ ಅಭ್ಯರ್ಥಿ ಸಮರ್ಥ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದ್ರೆ, ಕಾರ್ಯಕರ್ತರು ಸಿಎಂ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಪಟಾಕಿ ಹಚ್ಚಲು ರೆಡಿ ಮಾಡಿಕೊಂಡಿದ್ದರು. ಆದ್ರೆ, ಪಟಾಕಿ ಹಚ್ಚಲು ಅವಕಾಶ ಸಿಗದಿದಕ್ಕೆ ಯುವರು ಕೊಂಚ ಅಸಮಧಾನಗೊಂಡಿದ್ದು, ನಮ್ಮೂರಲ್ಲಿ ಜಾಸ್ತಿ ಹೊತ್ತು ಭಾಷಣ ಮಾಡಿಲ್ಲ ಎಂದು ಅಭಿಮಾನಿಯೋರ್ವ ಪ್ರೀತಿಯಿಂದ ಸಿದ್ದರಾಮಯ್ಯನವರಿಗೆ ಹೇಳಿದ ಪ್ರಸಂಗ ನಡೆದಿದೆ

ದಾವಣಗೆರೆ, (ಏ 01): ಕರ್ನಾಟಕದಲ್ಲಿ ಎರಡು ವಿಧಾನಭಾ ಕ್ಷೇತ್ರಗಳ ಉಪಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗೆ ಬಿರು ಬಿಸಿಲಿನಲ್ಲೂ ಗಲ್ಲಿ ಗಲ್ಲಿ ಸುತ್ತುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸಹ ಬಾಗಲಕೋಟೆಯಲ್ಲಿ ಮೂರು ದಿನ ತಮ್ಮ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಭರ್ಜರಿ ಪ್ರಚಾರ ಮಾಡಿ ಇದೀಗ ದಾವಣೆಗೆರೆ ಅಖಾಡಕ್ಕಿಳಿದಿದ್ದಾರೆ. ಹೌದು…ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಲಕೋಟೆ ಮುಗಿಸಿಕೊಂಡು ಇಂದು (ಏ 01) ದಾವಣಗೆರೆಗೆ ಕಾಲಿಟ್ಟಿದ್ದು, ತಮ್ಮ ಅಭ್ಯರ್ಥಿ ಸಮರ್ಥ್ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದ್ರೆ, ಕಾರ್ಯಕರ್ತರು ಸಿಎಂ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಪಟಾಕಿ ಹಚ್ಚಲು ರೆಡಿ ಮಾಡಿಕೊಂಡಿದ್ದರು. ಆದ್ರೆ, ಪಟಾಕಿ ಹಚ್ಚಲು ಅವಕಾಶ ಸಿಗದಿದಕ್ಕೆ ಯುವರು ಕೊಂಚ ಅಸಮಧಾನಗೊಂಡಿದ್ದು, ನಮ್ಮೂರಲ್ಲಿ ಜಾಸ್ತಿ ಹೊತ್ತು ಭಾಷಣ ಮಾಡಿಲ್ಲ ಎಂದು ಅಭಿಮಾನಿಯೋರ್ವ ಪ್ರೀತಿಯಿಂದ ಸಿದ್ದರಾಮಯ್ಯನವರಿಗೆ ಹೇಳಿದ ಪ್ರಸಂಗ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 01, 2026 05:57 PM
Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More