ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ವಿನೂತನ ಶೈಲಿಯಲ್ಲಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್
ಶಿವಕುಮಾರ್ ಈ ಭಾಗದಿಂದ ಆ ಭಾಗಕ್ಕೆ ಹೋಗೋದೇನೋ ಒಬ್ಬರೇ ಹೋಗುತ್ತಾರೆ, ಆದರೆ ಬರುವಾಗ ತಮ್ಮ ಹಿಂದೆ ಪಿಲಿಯನ್ ರೈಡರ್ ಆಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರನ್ನು ಕೂರಿಸಿಕೊಂಡು ಬರುತ್ತಾರೆ. ಸುರೇಶ್ ಸ್ಥಳೀಯ ಶಾಸಕ. ಗಣ್ಯರಿಬ್ಬರು ವಾಪಸ್ಸು ಬರುವಾಗಲೂ ಜನ ಜಿದ್ದಿಗೆ ಬಿದ್ದವರಂತೆ ಉಸೇನ್ ಬೋಲ್ಟ್ನನ್ನು ಮೀರಿಸುವ ಹಾಗೆ ದ್ವಿಚಕ್ರವಾಹನದ ಹಿಂದೆ ಓಡುತ್ತಾರೆ!
ಬೆಂಗಳೂರು, ಆಗಸ್ಟ್ 5: ಹೆಬ್ಬಾಳದಲ್ಲಿ ಮೇಲ್ಸೇತುವೆ ಕಾಮಗಾರಿ (Hebbal Flyover Works) ನಡೆಯುತ್ತಿರುವುದು ಬೆಂಗಳೂರಿನ ನಿವಾಸಿಗಳಿಗೆಲ್ಲ ಗೊತ್ತಿರುವ ಸಂಗತಿ. ಆದರೆ ಕಾಮಗಾರಿ ವೀಕ್ಷಿಸುವುದು ಇದ್ಯಾವ ವಿಧಾನ ಮಾರಾಯ್ರೇ? ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇವತ್ತು ಹೆಬ್ಬಾಳ ಮೇಲ್ಸೇತುವೆ ಕಾಮಗಾರಿಯನ್ನು ಹೀಗೆ ವೀಕ್ಷಿಸಿದರು. ಹೆಲ್ಮೆಟ್ ಧಾರಿಯಾಗಿ ಸ್ಕೂಟರೊಂದನ್ನು ಹತ್ತಿ ಅವರು ಕಾಮಗಾರಿ ನಡೆಯುತ್ತಿರುವ ಸೇತುವೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋದರು. ಅವರೇನೋ ವಾಹನ ಹತ್ತಿ ಹೊರಟರು, ಅದರೆ ಭದ್ರತಾ ಸಿಬ್ಬಂದಿ, ಪೊಲೀಸ್ ಮತ್ತು ಕೆಮೆರಾಮನ್ಗಳ ಅವಸ್ಥೆ ನೋಡಿ! ಡಿಸಿಎಂ ವಾಹನದ ಹಿಂದೆ ಬಿದ್ನೋ ಸತ್ನೋ ಅಂತ ಓಡುತ್ತಿದ್ದಾರೆ. ಗಾತ್ರದಲ್ಲಿ ಧಡೂತಿ ಅನಿಸುವ ಪೊಲೀಸರು ಸ್ವಲ್ಪಮಾತ್ರ ಓಡಿ ಏದುಸಿರು ಬಿಡುತ್ತಾ ನಿಂತುಬಿಡುತ್ತಾರೆ.
ಇದನ್ನೂ ಓದಿ: Karnataka Transport Strike; ಸಾರ್ವಜನಿಕ ಸೇವೆಯಲ್ಲಿರುವವರು ಜನರಿಗೆ ತೊಂದರೆಯಾಗದಂತೆ ವರ್ತಿಸಬೇಕು: ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
