ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ನಡೆಯುತ್ತಿದ್ದು ನಾಲ್ಕನೆಯ ದಿನವಾದ ಗುರುವಾರ ಶೂನ್ಯವೇಳೆಯಲ್ಲಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು. ಈ ವೇಳೆ DCM ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ಇದರಿಂದ ಬೊಮ್ಮಾಯಿ ಮಾತಿಗೆ DCM ಡಿಕೆಶಿಗೂ ನಗು ಬಂತು!
ನಮ್ಮ ಉಪಮುಖ್ಯಮಂತ್ರಿಗಳು ಸಾರ್ವಕಾಲಿಕ ಸತ್ಯ ಹೇಳಿದ್ದಾರೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಅಂದಿದ್ದಾರೆ. ಒಂದು ಕಾಲದಲ್ಲಿ ಪವರ್ ಪಾಲಿಟಿಕ್ಸ್ ವೈಟಿಂಗ್ ಗೇಮ್ ಆಗಿತ್ತು. ಈಗ ರಾಜಕಾರಣ ವೈಟಿಂಗ್ ಗೇಮ್ ಆಗಿ ಉಳಿದಿಲ್ಲ. ಯಾರೂ ಅಧಿಕಾರ ಕೊಡಲ್ಲ, ಅಧಿಕಾರ ಬಂದಾಗ ಪಡೆಯಬೇಕು. ಸರಿಯಾದ ರೀತಿಯಲ್ಲಿ ಅಧಿಕಾರ ಪಡೆಯಲು ಚುನಾವಣೆ ಅಂತಾರೆ. ಚುನಾವಣೆ ಇಲ್ಲದಿದ್ದಾಗ ಶಕ್ತಿ ಇದ್ದವನು ಅಧಿಕಾರ ಪಡೆದುಕೊಳ್ತಾನೆ. ಶಕ್ತಿ ಇಲ್ಲದವರು ಅಧಿಕಾರ ಪಡೆದುಕೊಳ್ಳಲ್ಲ ಎಂದು ಬಸವರಾಜ ಬೊಮ್ಮಾಯಿ ಮಾರ್ಮಿಕವಾಗಿ ಹೇಳಿದರು.
‘ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ’ ಎಂಬ ಮಾತಿದೆ. ಡಿಕೆ ಶಿವಕುಮಾರ್ ಅವರು ಕೊಟ್ಟ ಕುದುರೆಗಳನ್ನೆಲ್ಲಾ ಏರಿದ್ದಾರೆ, ಯಾವ ಸಂಶಯವೂ ಇಲ್ಲ. ಈ ಹಿಂದೆ ಡಿ.ಕೆ. ಶಿ ಪವರ್ ಖಾತೆ ತೆಗೆದುಕೊಂಡಿದ್ದರು. ಪವರ್ ಖಾತೆ ಜತೆಗೆ ಪವರ್ ಪಾಲಿಟಿಕ್ಸ್ ಸಹ ಡಿಕೆ ಮಾಡಿದ್ದರು. ಮುಂದೆ ಡಿ.ಕೆ. ಶಿವಕುಮಾರ್ಗೆ ಯಾವ ಕುದುರೆ ಸಿಗುತ್ತೆ ನೋಡೋಣ! ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ, ಬದಲಾವಣೆಯೇ ಶಾಶ್ವತ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
Published On - 5:03 pm, Thu, 6 July 23