Spar over Pendrive: ಹೆಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಕೆಜೆ ಜಾರ್ಜ್ ನಡುವೆ ಸದನದಲ್ಲಿ ಜೋರು ಮಾತಿನ ಕಾಳಗ!
ಸಭಾಧ್ಯಕ್ಷ ಯುಟಿ ಖಾದರ್ ಇಬ್ಬರಿಗೂ ಶಾಂತರಾಗುವಂತೆ ಹೇಳಿದರೂ ಹಿರಿಯ ನಾಯಕರಬ್ಬರೂ ಸುಮ್ಮನಾಗಲ್ಲ.
ಬೆಂಗಳೂರು: ಇಂಧನ ಸಚಿವ ಕೆಜೆ ಜಾರ್ಜ್ (KJ George) ಮತ್ತು ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ ಸದನದಲ್ಲಿ ಇಂದು ನೇರಾನೇರ ಮಾತಿನ ಕಾಳಗ ನಡೆಯಿತು. ಕುಮಾರಸ್ವಾಮಿ ನಿನ್ನೆಯಿಂದ ಇಂಧನ ಇಲಾಖೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ, ಒಂದೊಂದು ಪೋಸ್ಟಿಂಗ್ ಗೆ ರೂ. 10 ಕೋಟಿಯ ಹಾಗೆ ಎರಡು ಪೋಸ್ಟಿಂಗ್ ನಡೆದಿವೆ ಎಂದು ಆರೋಪಿಸಿ ಒಂದು ಪೆನ್ ಡ್ರೈವ್ ತೋರಿಸಿ ಪುರಾವೆ ಅದರಲ್ಲಿದೆ ಎಂದಿದ್ದರು. ಇಂದು ಸದನದಲ್ಲಿ ಪುನಃ ಅದರ ಪ್ರಸ್ತಾಪ ಮಾಡಿದಾಗ ಸಚಿವ ಜಾರ್ಜ್ ಅರೋಪವನ್ನು ಸಾಬೀತು ಮಾಡುವಂತೆ ಪೆನ್ ಡ್ರೈವ್ ನಲ್ಲಿ ಏನಿದೆ ತೋರಿಸುವಂತೆ ಸವಾಲು ಹಾಕಿದರು. ಕುಮಾರಸ್ವಾಮಿ ಈಗ್ಯಾಕೆ ತೋರಿಸಲಿ, ಸಮಯ ಬಂದಾಗ ತೋರಿಸುತ್ತೇನೆ ಅನ್ನುತ್ತಾರೆ. ಅದಕ್ಕೆ ಜಾರ್ಜ್ ನಿಮ್ಮ ಹಣೆಬರಹ ಗೊತ್ತು ಬಿಡ್ರೀ ಅಂತ ಮೂದಲಿಸಿದಾಗ ಕುಮಾರಸ್ವಾಮಿ ನಿಮ್ಮ ಹಣೆಬರಹ ನಂಗೊತ್ತಿಲ್ವಾ ಅನ್ನುತ್ತಾರೆ. ಅವರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಸಭಾಧ್ಯಕ್ಷ ಯುಟಿ ಖಾದರ್ ಇಬ್ಬರಿಗೂ ಶಾಂತರಾಗುವಂತೆ ಹೇಳಿದರೂ ಹಿರಿಯ ನಾಯಕರು ಸುಮ್ಮನಾಗಲ್ಲ. ಮತ್ತೊಬ್ಬ ಸಚಿವ ಎಂಬಿ ಪಾಟೀಲ್ (MB Patil) ಜಾರ್ಜ್ ನೆರವಿಗೆ ಧಾವಿಸಿ ಕುಮಾರಸ್ವಾಮಿ ಮೇಲೆ ದಾಳಿ ನಡೆಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

