ಶಾಸಕ ರಾಜು ಕಾಗೆ ಮಾಡಿರುವ ಆರೋಪಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ನಮ್ಮ ಶಾಸಕರು ತಮ್ಮ ಮೇಲೆ ಪ್ರೀತಿ ಅಕ್ಕರೆ ಇಟ್ಟುಕೊಳ್ಳಲಿ ಅಂತ ನನ್ನ ಮುಖ ನೋಡುತ್ತಿರುತ್ತಾರೆ ಎಂದು ಹೇಳಿದ ಶಿವಕುಮಾರ್, ರಾಜು ಕಾಗೆಯವರು ಹೇಳಿದ ಕೆಲಸಗಳನ್ನೆಲ್ಲ ಮಾಡಿಕೊಟ್ಟಿದ್ದೇನೆ ಎನ್ನುತ್ತಾರೆ. ಆದರೆ ರಾಜು ಅವರು, ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯರನ್ನು ಬೇರೆಡೆ ವರ್ಗ ಮಾಡಿ, ಅವರು ಶಾಸಕರೊಂದಿಗೆ ವರ್ತಿಸುವ ರೀತಿ ಸರಿಯಿಲ್ಲ ಎಂದು ಹೇಳಿದರೂ ಅಧಿಕಾರಿಯ ವರ್ಗ ಆಗಿಲ್ಲ ಎನ್ನುತ್ತಾರೆ.
ಬೆಂಗಳೂರು, ಜೂನ್ 25: ಕಾಂಗ್ರೆಸ್ ಶಾಸಕ ರಾಜು ಕಾಗೆ (Raju Kage) ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕಮಾರ್ ವಿರುದ್ಧ ಮಾಡಿರುವ ಅರೋಪಗಳಿಗೆ ಸಮಂಜಸ ಉತ್ತರ ಸಿಗುವಂತೆ ಕಾಣುತ್ತಿಲ್ಲ. ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತರು, ರಾಜು ಕಾಗೆ ಅವರೊಂದಿಗೆ ನೀವು ಸರಿಯಾಗಿ ಮಾತಾಡುತ್ತಿಲ್ಲವಂತೆ ಅಸಡ್ಡೆ ಮಾಡುತ್ತೀರಂತೆ ಅಂತ ಕೇಳಿದಾಗ ಶಿವಕುಮಾರ್, ಅವರ ಜೊತೆ ನೀವೂ ಬಂದು ನೋಡಿ ನನ್ನ ವರ್ತನೆ ಹೇಗಿರುತ್ತೆ ಅಂತ ಎನ್ನುತ್ತಾರೆ. ಮುಂದುವರಿದು ಮಾತಾಡುವ ಅವರು, ಮಾಧ್ಯಮದವರು ಪ್ರತಿದಿನ ಬೆಳಗ್ಗೆ ನನ್ನನ್ನು ನೋಡುತ್ತಾರೆ, ಎಲ್ಲರೊಂದಿಗೆ ನಗುತ್ತಲೇ ಮಾತಾಡುತ್ತೇನೆ ಎನ್ನುತ್ತಾರೆ.
ಇದನ್ನೂ ಓದಿ: ಸತೀಶ್ ಜಾರಕಿಹೊಳೆ ಮನೆಗೆ ಸಿಎಂ ಸಿದ್ದರಾಮಯ್ಯ ಊಟಕ್ಕೆ ಹೋದರೆ ಅದರಲ್ಲೇನು ತಪ್ಪು? ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ