ಕಾಂಗ್ರೆಸ್ ಪಕ್ಷದಲ್ಲಿ ಗಂಡಸರೂ ಇದ್ದಾರೆ ಅಂತ ಬಿಆರ್ ಪಾಟೀಲ್ ಸಾಬೀತು ಮಾಡಿದ್ದಾರೆ: ನಾರಾಯಣಸ್ವಾಮಿ ಚಲವಾದಿ
ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಹೊರಬರುತ್ತಿವೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರವನ್ನು ಮುಖ್ಯಮಂತ್ರಿಯವರೇ ಒಪ್ಪಿಕೊಂಡಿದ್ದಾರೆ, ₹ 187 ಕೋಟಿ ಅಲ್ಲ, ನಾವು ತಿಂದಿದ್ದು ₹87 ಕೋಟಿ ಮಾತ್ರ ಅಂತ ಅವರು ಹೇಳಿದ್ದಾರೆ, ಮುಡಾದಿಂದ 14 ಸೈಟುಗಳನ್ನು ಪಡೆಯುವಲ್ಲಿ ಯಾವುದೇ ಅಕ್ರಮ ಇಲ್ಲ ಅಂತಾಗಿದ್ದರೆ ಅವರು ಅವುಗಳನ್ನು ವಾಪಸ್ಸು ಯಾಕೆ ಕೊಟ್ಟರು ಎಂದು ನಾರಾಯಣಸ್ವಾಮಿ ಪ್ರಶ್ನಿಸಿದರು.
ಕಲಬುರಗಿ, ಜೂನ್ 25: ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಗಂಡಸರೇ ಇಲ್ಲ ಅಂದ್ಕೊಡಿದ್ದೆ, ಆದರೆ ಆಳಂದ್ ಶಾಸಕ ಬಿಅರ್ ಪಾಟೀಲ್ (Aland MLA BR Patil) ಅದನ್ನು ಸುಳ್ಳು ಮಾಡಿದ್ದಾರೆ, ಅವರ ನಂತರ ರಾಜು ಕಾಗೆ ಮತ್ತು ಗೋಪಾಲಕೃಷ್ಣ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ನಾರಾಯಣ ಸ್ವಾಮಿ ಚಲವಾದಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ನಾಯಕರು ಹೇಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪಹಾಸ್ಯ ಮಾಡಿದ್ದರು, ಈಗ ಅವರ ಪಕ್ಷದವರೇ ಆರೋಪಗಳನ್ನು ಮಾಡುತ್ತಿದ್ದಾರಲ್ಲ, ಏನು ಹೇಳುತ್ತಾರೆ? ಎಂದು ಚಲವಾದಿ ಪ್ರಶ್ನಿಸಿದರು.
ಇದನ್ನೂ ಓದಿ: ಸ್ಮಾರಕವಾಗಿರುವ ವಿಧಾನ ಸೌಧವನ್ನು ಸರ್ಕಾರ ಡಬ್ಬ ಅಂಗಡಿಯೆಂದು ಪರಿಗಣಿಸಿದೆ: ನಾರಾಯಣಸ್ವಾಮಿ ಚಲವಾದಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
