AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಾರಕವಾಗಿರುವ ವಿಧಾನ ಸೌಧವನ್ನು ಸರ್ಕಾರ ಡಬ್ಬ ಅಂಗಡಿಯೆಂದು ಪರಿಗಣಿಸಿದೆ: ನಾರಾಯಣಸ್ವಾಮಿ ಚಲವಾದಿ

ಸ್ಮಾರಕವಾಗಿರುವ ವಿಧಾನ ಸೌಧವನ್ನು ಸರ್ಕಾರ ಡಬ್ಬ ಅಂಗಡಿಯೆಂದು ಪರಿಗಣಿಸಿದೆ: ನಾರಾಯಣಸ್ವಾಮಿ ಚಲವಾದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 05, 2025 | 6:11 PM

Share

ಆಗಿರುವ ಪ್ರಮಾದವನ್ನು ಕೆಲ ಸಚಿವರು ಅಂಗೀಕರಿಸಿದ್ದಾರೆ, ಆದರೆ ಮುಖ್ಯಮಂತ್ರಿ ತಪ್ಪೊಪ್ಪಿಕೊಂಡಿದ್ದಾರಾ? ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿರುತ್ತದೆ, ವಿಧಾನಸೌಧವನ್ನು ಒಂದು ಡಬ್ಬದಂತೆ ಪರಿಗಣಿಸಿ ಅದನ್ನು ಅಪಹಾಸ್ಯ ಮಾಡಿದ್ದಾರೆ, ಆಗಿರುವ ಎಲ್ಲ ತಪ್ಪುಗಳನ್ನು ಒಪ್ಪಿಕೊಂಡು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ಸಲ್ಲಿಸಬೇಕೆಂದು ಅಂತ ಆಗ್ರಹಿಸುತ್ತೇನೆ ಎಂದು ಚಲವಾದಿ ಹೇಳಿದರು.

ಬೆಂಗಳೂರು, ಜೂನ್ 5: ಬಿಜೆಪಿ ನಾಯಕರ ಗುಂಪೊಂದು ಇಂದು ವಿಧಾನ ಸೌಧ ಆವರಣಕ್ಕೆ ಭೇಟಿ ನೀಡಿ ನಿನ್ನೆಯ ಕಾರ್ಯಕ್ರಮದ ನಿಮಿತ್ತ ಏನೆಲ್ಲ ಹಾಳಾಗಿವೆ ಅನ್ನೋದರ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿಧಾನ ಪರಿಷತ್​​ನಲ್ಲಿ ವಿಪಕ್ಷ ನಾಯಕ ನಾರಾಯಣಸ್ವಾಮಿ ಚಲವಾದಿ, ಒಂದು ಸ್ಮಾರಕವಾಗಿರುವ ವಿಧಾನ ಸೌಧ ಅವರಣದಲ್ಲಿರುವ ಪ್ರತಿಮೆಗಳು, ಗಿಡ ಮರಗಳು, ಗೇಟ್​ಗಳನ್ನು ರಕ್ಷಣೆ ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಹೈಕೋರ್ಟ್ ಮೇಲೂ ಜನ ಹತ್ತಿ ನಿಂತಿದ್ದರು, ಒಂದು ಕಾರ್ಯಕ್ರಮ ನಡೆಸಬೇಕಾದರೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲವೇ? ಸನ್ಮಾನ ಸಮಾರಂಭ ನಡೆಸುವ ಆತುರವೇನಿತ್ತು ಎಂದು ಚಲವಾದಿ ಪ್ರಶ್ನಿಸಿದರು.

ಇದನ್ನೂ ಓದಿ:  ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಬಣ ಬಡಿದಾಟ ನಡೆದರೆ ನಮ್ಮಲ್ಲಿ ಪಕ್ಷದ ಸಂಘಟನೆಗಾಗಿ: ನಾರಾಯಣಸ್ವಾಮಿ ಚಲವಾದಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ