Bengaluru Stampede; ತಳ್ಳಾಟದಲ್ಲಿ ಪತಿಯಿಂದ ಬೇರ್ಪಟ್ಟ ಅಕ್ಷತಾ ಪೈ ಸಿಕ್ಕಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ, ಶವವಾಗಿ!
ಜನ ಚೆಲ್ಲಾಪಿಲ್ಲಿಯಾಗಿ ಓಡಾಡುತ್ತಿದ್ದ ಕಾರಣನ ಅಕ್ಷತಾ ಎಲ್ಲಿದ್ದಾರೆಂದು ಪತಿಗೆ ಗೊತ್ತಾಗದೆ ಹುಡುಕಾಡಿದ್ದಾರೆ, ಯಾರೋ ಒಬ್ಬರು ವೈದೇಹಿ ಅಸ್ಪತ್ರೆಗೆ ಒಯ್ದಿದ್ದಾರೆಂದು ಹೇಳಿದ ಬಳಿಕ ಅಲ್ಲಿಗೋಡಿದ್ದಾರೆ. ಆದರೆ ಅಕ್ಷತಾ ಸಿಕ್ಕಿಲ್ಲ. ನಂತರ ಬೌರಿಂಗ್ ಆಸ್ಪತ್ರೆಯಿಂದ ಫೋನ್ ಬಂದ ಕಾರಣ ಅಲ್ಲಿಗೆ ಧಾವಿಸಿದ್ದಾರೆ. ಅಲ್ಲಿಯ ವೈದ್ಯರೊಬ್ಬರು, ಅಕ್ಷತಾ ಅವರನ್ನು ಇಲ್ಲಿಗೆ ತರುವಷ್ಟರಲ್ಲಿ ಪ್ರಾಣ ಹೋಗಿತ್ತು ಅಂತ ಹೇಳಿದ್ದಾರೆ.
ಕಾರವಾರ, ಜೂನ್ 5: ಅರ್ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದ ಘಟನೆಯಲ್ಲಿ ಮಡಿದ ಅಕ್ಷತಾ ಪೈ ಅವರ ಪತಿ ನಮ್ಮ ಉತ್ತರ ಕನ್ನಡ ವರದಿಗಾರನೊಂದಿಗೆ ಮಾತಾಡಿದ್ದಾರೆ. ಅರ್ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲೆಂದೇ ಇವರು ಅರ್ಧದಿವಸ ರಜೆ ಹಾಕಿ ಹೆಂಡತಿಯನ್ನು ಕರೆದುಕೊಂಡು ಚಿನ್ನಸ್ವಾಮಿ ಸ್ಟೇಡಿಯಂ ಬಂದಿದ್ದಾರೆ. ಗೇಟ್ ನಂಬರ್ 17 ರ ಮುಖಾಂತರ ಎಲ್ಲರನ್ನೂ ಉಚಿತವಾಗಿ ಒಳಗೆ ಬಿಡುತ್ತಿರುವುದು ಗೊತ್ತಾಗಿ ಇವರು ಅಲ್ಲಿಗೆ ಹೋಗಿದ್ದಾರೆ. ಗೇಟ್ ಅರ್ಧಮಾತ್ರ ತೆರೆದಿದ್ದ ಕಾರಣ ನೂಕು ನುಗ್ಗಲು ಶುರುವಾಗಿ ಅದುವರೆಗೆಗ ಪತಿಯ ಕೈ ಹಿಡಿದಿದ್ದ 26-ವರ್ಷದ ಅಕ್ಷತಾ ಬೇರ್ಪಟ್ಟಿದ್ದಾರೆ. ಇಬ್ಬರೂ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಅದರೆ ಯಾರೋ ಅಕ್ಷತಾ ಪತಿಯನ್ನು ಎಳೆದುಕೊಂಡಿದ್ದರಿಂದ ಬದುಕಿಕೊಂಡಿದ್ದಾರೆ.
ಇದನ್ನೂ ಓದಿ: Bengaluru Stampede; ಕನ್ನಡಿಗರೇ ಇಲ್ಲದ ಆರ್ಸಿಬಿ ತಂಡಕ್ಕೆ ಸಿಎಂ ಮಟ್ಟದಲ್ಲಿ ಸನ್ಮಾನ ಬೇಕಿರಲಿಲ್ಲ: ಹಿರಿಯ ನಾಗರಿಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ