AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಜೀವಂತ ಸಾಕ್ಷಿಯಾದ ರಾಶಿ ರಾಶಿ ಚಪ್ಪಲಿಗಳು

ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಜೀವಂತ ಸಾಕ್ಷಿಯಾದ ರಾಶಿ ರಾಶಿ ಚಪ್ಪಲಿಗಳು

ಶಾಂತಮೂರ್ತಿ
| Updated By: Ganapathi Sharma|

Updated on:Jun 05, 2025 | 9:07 AM

Share

ಕ್ರಿಕೆಟ್ ಪಂದ್ಯಗಳ ಸಂದರ್ಭಗಳಲ್ಲಿ ಜನರಿಂದ ಹರ್ಷೋದ್ಘಾರದ, ಸಂಭ್ರಮದ ಕೇಕೆಗಳ ಧ್ವನಿ ಕೇಳಿಸುತ್ತಿದ್ದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಈಗ ಅಕ್ಷರಶಃ ಸ್ಮಶಾನವಾಗಿಬಿಟ್ಟಿದೆ. ಬುಧವಾರವಂತೂ ಕಾಲ್ತುಳಿತದಿಂದ ಜನರ ಆಕ್ರಂದನ ಮುಗಿಲುಮುಟ್ಟಿತ್ತು. ಇದೀಗ ಅನಾಥವಾಗಿ ರಾಶಿ ಬಿದ್ದಿರುವ ಚಪ್ಪಲಿಗಳು ದುರಂತದ ತೀವ್ರತೆ ಹೇಗಿದ್ದಿರಬಹುದು ಎಂಬುದನ್ನು ಸಾರಿ ಹೇಳುತ್ತಿವೆ.

ಬೆಂಗಳೂರು, ಜೂನ್ 5: ಆರ್​ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ಈಗ ಸೂತಕದ ಮನೆಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಟೇಡಿಯಂ ಹೊರಭಾಗದಲ್ಲಿ ರಾಶಿ ರಾಶಿಯಾಗಿ ಬಿದ್ದಿರುವ ಚಪ್ಪಲಿಗಳು ದುರಂತಕ್ಕೆ ಸಾಕ್ಷಿ ನುಡಿಯುತ್ತಿವೆ. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 05, 2025 09:05 AM