Bengaluru Stampede: ಸ್ಟೇಡಿಯಂ ಗೇಟ್ಗಳ ಬಳಿಯೇ ಯಮರಾಜ ಸುಳಿದಾಡುತ್ತಿದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ
ಚಿನ್ನಸ್ವಾಮಿ ಸ್ಟೇಡಿಯಂನ ಸಾಮರ್ಥ್ಯವಿರೋದು 35,000 ಜನಕ್ಕೆ ಮಾತ್ರ, ಅದರೆ ಜಮಾ ಆಗಿದ್ದು ಒಂದೂವರೆ ಲಕ್ಷಕ್ಕೂ ಹೆಚ್ಚು. ಅರ್ಸಿಬಿ ಅಟಗಾರರು ಅಲ್ಲಿಗೆ ಬರುತ್ತಾರೆ, ಮೆರವಣಿಗೆ ನಡೆಯುತ್ತದೆ, ಸತ್ಕಾರ ನಡೆಯುತ್ತದೆ ಎಂಬ ಕಾರಣಕ್ಕೆ ಅಭಿಮಾನಿಗಳು ಆಟಗಾರರನ್ನು ನೋಡಲು ಕಾಯುತ್ತಿದ್ದರು. ಸ್ಟೇಡಿಯಂ ಗೇಟ್ಗಳ ಬಳಿಯೇ ಯಮರಾಯ ಸುಳಿದಾಡುತ್ತಿರೋದು ಯಾರಿಗೂ ಗೊತ್ತಾಗಲಿಲ್ಲ.
ಬೆಂಗಳೂರು, ಜೂನ್ 5: ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಮುಂಭಾಗದಲ್ಲಿ ನಡೆದಿರುವ ಘೋರ ದುರಂತವನ್ನು ಕನ್ನಡಿಗರು ಮರೆಯಲು ಸಾಧ್ಯವಿಲ್ಲ. ದುರಂತ ನಡೆದ ಸ್ಥಳದಲ್ಲಿ ನಮ್ಮ ವರದಿಗಾರ ಇದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ ಮೇನ್ ಗೇಟ್ ಮತ್ತು ಬೇರೆ ಗೇಟ್ಗಳಲ್ಲಿ ಅದರಲ್ಲೂ ಮುಖ್ಯವಾಗಿ ಗೇಟ್ ನಂಬರ್ 17 ರ ಬಳಿ ಕಾಲ್ತುಳಿತದ ಘಟನೆ ಸಂಭವಿಸಿ 11 ಜನ ಅಸುನೀಗಿದರು ಮತ್ತು 20ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸತ್ತವರಿಗೆ ₹ 10 ಲಕ್ಷ ಪರಿಹಾರವನ್ನೇನೋ ಘೋಷಿಸಿದೆ, ಆದರೆ ಆ ಹಣದಿಂದ ಆಗೋದಾದರೂ ಏನು? ಸತ್ತವರಲ್ಲಿ ವರ್ಷಕ್ಕೆ ₹ 10 ಲಕ್ಷಕ್ಕಿಂತ ಹೆಚ್ಚು ದುಡಿಯುತ್ತಿದ್ದ ಜನರೂ ಇದ್ದಿರಬಹುದು. ಸಂಭ್ರಮಾಚರಣೆಯ ಸಂದರ್ಭ ಹೀಗೆ ಶೋಕದಲ್ಲಿ ಪರ್ಯಾವಸನಗೊಂಡಿದ್ದನ್ನು ಕನ್ನಡಿಗ ಅರಗಿಸಿಕೊಳ್ಳುತ್ತಿಲ್ಲ.
ಇದನ್ನೂ ಓದಿ: RCB IPL Victory Stampede: ಕಾಲ್ತುಳಿತ ಪ್ರಕರಣದ ತನಿಖೆ ಮ್ಯಾಜಿಸ್ಟ್ರೇಟ್ ಹೆಗಲಿಗೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
