ಕಾಲ್ತುಳಿತ ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ಬರೋಬ್ಬರಿ ಹದಿನೆಂಟು ವರ್ಷಗಳ ಬಳಿಕ ಆರ್‌ಸಿಬಿ ತಂಡ ಐಪಿಎಲ್ ಗೆದ್ದಿದ್ದು, ಇಡೀ ಕರುನಾಡು ಸಂಭ್ರಮದಲ್ಲಿ ತೇಲುವಂತೆ ಮಾಡಿತ್ತು. ಆದರೆ ಕಾಲ್ತುಳಿದಿಂದಾದ ಸಾವು ಕರುನಾಡನ್ನ ಸೂತಕದ ಮನೆ ಮಾಡಿದೆ. ಸಾವಿರಾರು ಜನರು ಮಧ್ಯೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಜನರು ತೊಟ್ಟಿದ್ದ, ಶೂಗಳು ಮತ್ತು ಚಪ್ಪಲಿಗಳು ಇಲ್ಲೇ ಉಳಿದಿದ್ದು, ಸಾವಿನ ಕಥೆ ಹೇಳುತ್ತಿವೆ.
ಬೆಂಗಳೂರು, ಜೂನ್ 05: ಆರ್‌ಸಿಬಿ (RCB) 2025 ಐಪಿಎಲ್ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಇಡೀ ಕರುನಾಡು ಸಂಭ್ರಮಿಸಿತ್ತು. 18 ವರ್ಷಗಳ ಬಳಿಕ ಕಪ್ ಗೆದ್ದ ಖುಷಿ ಎಲ್ಲರನ್ನೂ ಮನೆ ಮಾಡಿತ್ತು. ಆದರೆ ಈ ಖುಷಿ 18 ಗಂಟೆಗಳಲ್ಲೇ ಕಮರಿ ಹೋಗಿದೆ. ಆರ್‌ಸಿಬಿಯ ಗರ್ಭಗುಡಿಯಂತಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆಯೇ ಅಭಿಮಾನಿಗಳ ಮಾರಣಹೋಮವೇ ನಡೆದಿದೆ. ಸಾವಿರಾರು ಜನರ ಮಧ್ಯೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಜನರು ತೊಟ್ಟಿದ್ದ, ಶೂಗಳು ಮತ್ತು ಚಪ್ಪಲಿಗಳು ಇಲ್ಲೇ ಉಳಿದಿದ್ದು, ಭೀಕರ ದುರಂತಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ. ಒಂದೊಂದು ಚಪ್ಪಲಿಗಳು ಸಾವಿನ ಕಥೆಯನ್ನು ಹೇಳುತ್ತಿವೆ. ಸದ್ಯ ಬಿಬಿಎಂಪಿ ಸಿಬ್ಬಂದಿಗಳು ಸ್ಟೇಡಿಯಂ ಬಳಿ ಬಿದ್ದಿದ್ದ ಲೋಡ್ಗಟ್ಟಲೇ ಚಪ್ಪಲಿಗಳನ್ನು ಕಸದ ಗಾಡಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.