Live: ವಿಜಯೇಂದ್ರ, ಅಶೋಕ್ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
18 ವರ್ಷದ ಸಂಭ್ರಮ 18 ಗಂಟೆಯೂ ಇರ್ಲಿಲ್ಲ.. ಎರಡು ದಶಕದ ಬಳಿಕದ ಸಂಭ್ರಮಾಚರಣೆ ಎರಡು ದಿನವೂ ಇರ್ಲಿಲ್ಲ.. ಐಪಿಎಲ್ ಸಾಮ್ರಾಜ್ಯ ಗೆದ್ದು ಬಂದ ಕಲಿಗಳನ್ನ ವಿಧಾನಸೌಧದ ಮೆಟ್ಟಿಲು ಮೇಲೆ ನಿಲ್ಲಿಸಿ ಹೂವಿನ ಹಾರಹಾಕ್ತಿದ್ರೆ, ಇಲ್ಲಿಂದ ಕೂಗಳತೆ ದೂರದಲ್ಲೇ ಇರೋ ಚಿನ್ನಸ್ವಾಮಿ ಅಂಗಳದ ಮುಂದೆ ಅಭಿಮಾನಿಗಳ ಮಾರಣಹೋಮ ಆಗಿತ್ತು.
ಬೆಂಗಳೂರು, ಜೂನ್ 05: ಬರೋಬ್ಬರಿ 18 ವರ್ಷಗಳ ಕಾಯುವಿಕೆ ಅಂತ್ಯವಾಗಿತ್ತು. ಆರ್ಸಿಬಿ ತಂಡ ಐಪಿಎಲ್ ಕಪ್ ಎತ್ತಿ ಹಿಡಿಯುತ್ತಿದ್ದಂತೆ ಇಡೀ ಕರುನಾಡು ಸಂಭ್ರಮಿಸಿತ್ತು. ಆದರೆ ಅದೇ ಸಂಭ್ರಮ ಒಂದೇ ದಿನದಲ್ಲಿ ಅಂತ್ಯವಾಗಿದೆ. ಸಂಭ್ರಮಾಚರಣೆ ವೇಳೆ ಉಂಟಾಗಿರುವ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳು ಬಲಿ ಆಗಿದ್ದಾರೆ. ಸದ್ಯ ಈ ಘಟನೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಘಟನೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣವೆಂಬ ಆರೋಪ ಕೇಳಿಬಂದಿದೆ. ಬಿಜೆಪಿ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದೆ. ಈ ವಿಚಾರವಾಗಿ ಇದೀಗ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜಂಟಿ ಸುದ್ದಿಗೋಷ್ಠಿ ಮಾಡಿದ್ದಾರೆ. ಅದರ ನೇರ ಪ್ರಸಾರ ಇಲ್ಲಿದೆ.