Bengaluru Stampede; ಗುಪ್ತಚರ ಇಲಾಖೆಯ ವೈಫಲ್ಯಕ್ಕೆ ಸರ್ಕಾರ ನೈತಿಕ ಹೊಣೆ ಹೊರಲಿ: ಡಾ ಕೆ ಸುಧಾಕರ್
ನಮ್ಮ ಮಿನಿಸ್ಟ್ರುಗಳಿಗೆ ಆಟಗಾರರ ಜೊತೆ ಸೆಲ್ಫೀ ತೆಗೆದುಕೊಳ್ಳೋದು, ಸಂಬಂಧಿಕರನ್ನು ಆಟಗಾರರಿಗೆ ಪರಿಚಯಿಸೋದು ಬೇಕಿತ್ತಾ? ಆಟಗಾರರ ಬಗ್ಗೆ ಅವರಿಗೆ ಅಷ್ಟೆಲ್ಲ ಅಭಿಮಾನವಿದ್ದರೆ ಮನೆಗೆ ಕರೆದು ತಿಂಡಿ ತಿನ್ನಿಸಲಿ, ಲಕ್ಷಾಂತರ ಜನ ಆಗಮಿಸಿದ್ದರು ಅಂತ ಹೇಳುತ್ತಾರೆ, ನಮಗದು ಗೊತ್ತಾಗಲ್ಲವೇ? ಸ್ಟೇಡಿಯಂ ಬಳಿ ಅಭಿಮಾನಿಗಳ ಮೇಲೆ ಲಾಠಿಚಾರ್ಜ್ ಕೂಡ ಆಗಿದೆ, ಕೆಲವರು ತಲೆಗೆ ಪೆಟ್ಟು ತಿಂದಿದ್ದಾರೆ ಎಂದು ಸುಧಾಕರ್ ಹೇಳಿದರು.
ಬೆಂಗಳೂರು, ಜೂನ್ 5: ನಿನ್ನೆ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದ ಘಟನೆ ಮತ್ತು ಜನರ ಸಾವು ಸರ್ಕಾರ ಮತ್ತು ಗುಪ್ತಚರ ಇಲಾಖೆಯ ಸಂಪೂರ್ಣ ವೈಫಲ್ಯ ಎಂದು ಸಂಸದ ಡಾ ಕೆ ಸುಧಾಕರ್ (Dr K Sudhakar) ಹೇಳಿದರು. ದೂರದ ಅಹ್ಮದಾಬಾದ್ನಲ್ಲಿ ಅರ್ಸಿಬಿ ಗೆದ್ದಾಗಲೇ ದೀಪಾವಳಿಗೆ ಕಡಿಮೆ ಇಲ್ಲದಂತೆ ಬೆಂಗಳೂರಲ್ಲಿ ಸಂಭ್ರಮ ಆಚರಿಸಲಾಗಿತ್ತು. ಇನ್ನು ಅವರು ಬಂದಾಗ ವಿಜಯೋತ್ಸವ ಯಾವ ಪ್ರಮಾಣದಲ್ಲಿ ನಡೆಯಬಹುದೆಂಬ ಅರಿವು ಗುಪ್ತಚರ ಇಲಾಖೆಗೆ ಇರಲಿಲ್ಲವೇ? ಸಂಭ್ರಮಾಚರಣೆ, ಸತ್ಕಾರ ಮತ್ತು ಮೆರವಣಿಗೆಯ ಬಗ್ಗೆ ಸ್ಪಷ್ಟತೆಯೇ ಇರಲಿಲ್ಲ, ನಮ್ಮಂಥವರಲ್ಲೂ ಗೊಂದಲ ಮೂಡಿತ್ತು, ಜನ ಸಾಮಾನ್ಯರಿಗೆ ಅದು ಹೇಗೆ ಅರ್ಥವಾದೀತು? ತನ್ನ ಬೇಜವಾಬ್ದಾರಿತನಕ್ಕೆ ಸರ್ಕಾರ ನೈತಿಕ ಹೊಣೆ ಹೊರಬೇಕು ಎಂದು ಸುಧಾಕರ್ ಹೇಳಿದರು.
ಇದನ್ನೂ ಓದಿ: ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸಿಎಂ, ಡಿಸಿಎಂ ಸೇರಿ ಅಧಿಕಾರಿಗಳ ವಿರುದ್ಧ ಸ್ನೇಹಮಯಿ ದೂರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ